ಮಂಗಳೂರು : ಮಂಗಳೂರಿನ ಹೊರವಲಯದ ಕುಂಜತ್ತಬೈಲ್ ನಲ್ಲಿ ಒಂಟಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪರಿಸರವಾಸಿಗಳಿಗೆ ಅತೀವ ವೇದನೆ ತಂದಿದೆ ಮತ್ತು ನಮಗೆ ಇದು ತುಂಬಲಾರದ ನಷ್ಟವಾಗಿದೆ ಎಂದು ಸ್ಥಳೀಯರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
60 ರ ಹರೆಯದ ಶಶಿಕಲಾ ಶೆಟ್ಟಿ ಒಂಟಿ ಮಹಿಳೆ , ಪರಿಸರ ಪ್ರೇಮಿ ಮತ್ತು ಪ್ರಾಣಿ ಪಕ್ಷಿಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದರು.ಅದರಲ್ಲೂ ಅಸಂಖ್ಯ ಸಂಖ್ಯೆಯ ಶ್ವಾನಗಳನ್ನು ಇವರು ಸಾಕುತ್ತಿದ್ದರು.ಎಷ್ಟೊಂದು ಸಂಖ್ಯೆಯ ಶ್ವಾನಗಳು ಇವರ ಮನೆಯ ಆವರಣದಲ್ಲಿ ಇರುವುದರಿಂದ ಯಾರೊಬ್ಬರೂ ಸುಲಭವಾಗಿ ಮನೆಯೊಳಗೆ ಪ್ರವೇಶಿಸುವುದು ಕಷ್ಟಕರವಾಗಿತ್ತು.
ಪಟ್ಲಾ ಫೌಂಡೇಶನ್ ವತಿಯಿಂದ ಕಳೆದ 6 ವರ್ಷದ ಮೊದಲು ಈ ಶ್ವಾನ ಪ್ರೇಮಿ ಶಶಿಕಲಾ ಶೆಟ್ಟಿ ಯವರಿಗೆ ವ್ಯವಸ್ಥಿತವಾದ ಮನೆ ನಿರ್ಮಿಸಿಕೊಟ್ಟಿತ್ತು.ಪರಿಸರವಾಸಿಗಳೊಂದಿಗೆ ತುಂಬಾ ಅನ್ಯೋನ್ಯತೆಯಿಂದ ಇದ್ದ ಇವರು ಎಲ್ಲರಿಗೂ ಆತ್ಮೀಯರಾಗಿದ್ದರು.
ಸ್ಥಳೀಯರು ಇವರ ಮನೆ ಪರಿಸರದಲ್ಲಿ ಓಡಾಡುತ್ತಿರುವಾಗ ಏನೋ ಕೊಳೆತ ವಾಸನೆ ಬಂದ ಕಾರಣ ಸ್ಥಳೀಯರು ಶೋಧ ಕಾರ್ಯ ನಡೆಸಿದಾಗ ಶಶಿಕಲಾ ಶೆಟ್ಟಿ ಯವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಸುಮಾರು ಮೂರು ದಿನಗಳ ಮೊದಲು ಇವರು ಮೃತ ಪಟ್ಟಿರಬಹುದೆಂದು ಅಂದಾಜಿಸಲಾಯಿತಾದರೂ ಶವ ಕೊಳೆತು ನಾರುವ ಸ್ಥಿತಿಯಲ್ಲಿ ಇತ್ತು.ಶ್ವಾನ ಸಹಿತ ಪ್ರಾಣಿ ಪಕ್ಷಿಗಳ ಮತ್ತು ಪರಿಸರ ಪ್ರೇಮಿಯಾದ ಇವರ ಅಗಲುವಿಕೆ ಇವರ ಒಡನಾಡಿಗಳಿಗೆ ದಿಗ್ಬ್ರಮೆ ಮೂಡಿಸಿದೆ.