ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ BKMU ವತಿಯಿಂದ ಬ್ರಹತ್ ಮಾರ್ಚ್ ಹಾಗೂ ಧರಣಿ.

ಕೃಷಿ ಕಾರ್ಮಿಕರಿಗಾಗಿ ಸಮಗ್ರ ರಾಷ್ಟ್ರೀಯ ಕಾನೂನು ಜಾರಿಗೆ ತರಬೇಕು,ಭೂರಹಿತರಿಗೆ ಭೂಮಿ ಮಂಜೂರು ಮಾಡಬೇಕು,ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ರೂ. 6,000ಕ್ಕೆ ಹೆಚ್ಚಿಸಿ ಜಾತಿ ಗಣತಿ ಜಾರಿಗೊಳಿಸಿ ಖಾಸಗಿ ವಲಯದಲ್ಲಿ ಎಸ್.ಸಿ, ಎಸ್.ಟಿ, ಓ.ಬಿ.ಸಿ ಮೀಸಲಾತಿ ಜಾರಿಗೆ ತರಬೇಕು,
ಉದ್ಯೋಗ ಖಾತರಿ ಯೋಜನೆಯನ್ನು ನಾಶ ಮಾಡುವ ಕೇಂದ್ರ ಸರಕಾರದ ಪ್ರಯತ್ನಗಳನ್ನು ಕೊನೆ ಗೊಳಿಸಿ ಕೆಲಸದ ದಿನಗಳು ಮತ್ತು ವೇತನವನ್ನು ಹೆಚ್ಚಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿಕೊಂಡು ಕೃಷಿ ಕಾರ್ಮಿಕ ರ ಯೂನಿಯನ್ (BKMU) ವತಿಯಿಂದಕೇರಳದ 140 ವಿಧಾನ ಸಭಾ ವ್ಯಾಪ್ತಿಯ ಕೇಂದ್ರ ಸರಕಾರಿ ಕಚೇರಿ ಮುಂದೆ ರಾಷ್ಟೀಯ ಪ್ರತಿಭಟನೆ ನಡೆಯಿತು.

ಇದರ ಅಂಗವಾಗಿ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಹೊಸಂಗಡಿ ಅಂಚೆ ಕಚೇರಿಗೆ ಮಾರ್ಚ್ ಮತ್ತು ಧರಣಿ ನಡೆಯಿತು. BKMU ಜಿಲ್ಲಾ ಕಾರ್ಯದರ್ಶಿ ಎಂ. ಕುಮಾರನ್ ಧರಣಿ ಉದ್ಘಾಟಿಸಿದರು. BKMU ಮಂಡಲ ಸಮಿತಿ ಸದಸ್ಯರಾದ ಪೂವಪ್ಪ ಕಲ್ಲೂರ ಅಧ್ಯಕ್ಷತೆ ವಹಿಸಿದರು. ಸಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಜಯರಾಮ ಬಲ್ಲಂಗುಡೇಲ್, ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್, AIYF ಜಿಲ್ಲಾ ಅಧ್ಯಕ್ಷರಾದ ಅಜಿತ್ ಎಂ.ಸಿ ಲಾಲ್ ಬಾಗ್, NFIW ನೇತಾರೆ ಚಿತ್ರಾವತಿ ಅಂಜರೆ,ಮೋಟಾರ್ ಯೂನಿಯನ್(AITUC) ಜಿಲ್ಲಾ ಅಧ್ಯಕ್ಷ ಮುಸ್ತಫಾ ಕಡಂಬಾರ್ ಮೊದಲಾದವರು ಮಾತನಾಡಿದರು.

ಚನಿಯಪ್ಪ ಬೆಜ್ಜ, ಬಾಬು ಕೋಡಿಬೈಲ್, ಶರತ್ ಬೆಜ್ಜ, ಗುರುವ ಕೋಡಿಬೈಲ್, ಕೇಶವ ಕಣ್ವತೀರ್ಥ, ಯತೀಶ್ ಬಿ.ಎಂ, ಅಬೂಬಕ್ಕರ್ ಬಡಾಜೆ, ಬಾಪ್ಪ ಕುಂಞ ಬಡಾಜೆ, ಕಿರಣ್ ಮಾಡ,ನಿರಂಜನ್ ಕಣ್ವತೀರ್ಥ, ನವೀನ್ ಬಡಾಜೆ, ವಿಜಯ ಕಾಜೂರ್, ಉಮೇಶ್ ಪದವು, ಪ್ರದೀಶ್ ಬಡಾಜೆ, ಶನೀಶ್ ಮಂಜೇಶ್ವರ ಮೊದಲಾದವರು ನೇತೃತ್ವ ನೀಡಿದರು.

BKMU ಮಂಡಲ ಅಧ್ಯಕ್ಷ ಎಸ್. ರಾಮಚಂದ್ರ ಬಡಾಜೆ ಸ್ವಾಗತಿಸಿ, ಸಿಪಿಐ ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಶ್ರೀಧರ್ ಮಾಡ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!