ಸುಡುವಬಿಸಿಲಿನಲ್ಲಿ ಮತದಾರರಿಗೆ ದಾಹ ನೀರು – ಮಂಗಲ್ಪಾಡಿ ಯುವಕರ ಸೇವೆ ಮಾದರಿ

ಕಾಸರಗೋಡು ಗಡಿಭಾಗದ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಮಾನವೀಯತೆ ಮೆರೆಯುವ ಕಾರ್ಯ ಗಮನ ಸೆಳೆದಿದೆ. ಸುಡುವ ಬಿಸಿಲಿನ ನಡುವೆಯೂ ಮತದಾನಕ್ಕೆ ಆಗಮಿಸಿದವರಿಗೆ ದಾಹ ನೀರು ಒದಗಿಸುವ ಮೂಲಕ ಯುವಕರ ತಂಡವೊಂದು ಮಾದರಿಯಾಗಿದೆ.

ಮಂಗಲ್ಪಾಡಿ ಪ್ರದೇಶದ ಪಾರಕ್ಕಟ್ಟ ಫ್ರೆಂಡ್ಸ್ ಕ್ಲಬ್ ಕಾರ್ಯಕರ್ತರು ಮತದಾರರಿಗಾಗಿ ತಂಪಾದ ಕಲ್ಲಂಗಡಿ ಹಣ್ಣಿನ ಜ್ಯೂಸ್ ಸಿದ್ಧಪಡಿಸಿ, ಅಗತ್ಯವಿರುವ ಎಲ್ಲರಿಗೂ ವಿತರಿಸಿದರು. ತೀವ್ರ ಬಿಸಿಲಿನ ನಡುವೆ ಮತದಾನಕ್ಕೆ ಬಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ಇದು ಹೆಚ್ಚಿನ ದಾಹ ನೀಗಿಸಲು ಸೂಕ್ತವಾಯಿತು.

ಯುವಕರ ಈ ಸೇವಾ ಮನೋಭಾವ ಸ್ಥಳೀಯರಲ್ಲಿ ಪ್ರಶಂಸೆ ಗಳಿಸಿದ್ದು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೂ ಕ್ಲಬ್ ಕಾರ್ಯಕರ್ತರ ಕಾರ್ಯವನ್ನು ಅಭಿನಂದಿಸಿದರು.

ಬಿಸಿಲಿನ ಕಠಿಣ ಪರಿಸ್ಥಿತಿಯಲ್ಲಿಯೂ ಸಮಾಜ ಸೇವೆಯ ಮೂಲಕ ಮತದಾನ ಪ್ರಕ್ರಿಯೆಗೆ ನೆರವಾದ ಈ ಯುವಕರ ಕಾರ್ಯ ನಾಡಿಗೆ ಮಾದರಿಯಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!