ಜನಜಾಗೃತಿಯ ಹಾದಿಯಲ್ಲಿ ದೀಪ ಜ್ಯೋತಿಯಾಗಿದ್ದ ಕುಳೂರು ಬೀಡು ಕೆ.ದಾಸಣ್ಣ ಆಳ್ವ ನಿಧನ

ಮಂಜೇಶ್ವರ: ಮೀಂಜ ಗ್ರಾಮ ಪಂಚಾಯಿತು ವ್ಯಾಪ್ತಿಯ ಕುಳೂರು ಗ್ರಾಮದ, ಸಮಾಜಸೇವೆ ಮತ್ತು ಜನಜಾಗೃತಿಯ ಹಾದಿಯಲ್ಲಿ ದೀಪದಂತೆ ಜ್ಯೋತಿ ಹರಡಿದ್ದ ಹಿರಿಯ ಸಮಾಜ ಸೇವಕ ಹಾಗೂ ಕುಳೂರು ಬೀಡಿನ ಮನೆತನದ ಹಿರಿಯ ಸದಸ್ಯ ಧಾರ್ಮಿಕ, ಕುಳೂರು ಬೀಡು ಕೆ. ದಾಸಣ್ಣ ಆಳ್ವ (93) ಇಂದು ಮುಂಜಾನೆ ನಿಧನರಾಗಿದ್ದಾರೆ.

ಅಸೌಖ್ಯ ನಿಮ್ಮಿತ ಕಳೆದ ಒಂದು ವಾರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆಗೆ ಸ್ಪಂಧಿಸದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಮೃತರ ಅಂತ್ಯಕ್ರಿಯೆಯ ವಿಧಿ ವಿಧಾನಗಳು ಅಪರಾಹ್ನ 3.30 ಕ್ಕೆ ಮನೆ ಪರಿಸರದಲ್ಲಿ ನಡೆಯಲಿರುವುದಾಗಿ ಸಂಬಂಧ ಪಟ್ಟವರು “ನಮ್ಮ ಮೀಡಿಯಾ” ಸುದ್ದಿವಾಹಿನಿಗೆ ತಿಳಿಸಿದ್ದಾರೆ.


ಕುಳೂರು ಗ್ರಾಮದ ಕುಳೂರು ಬೀಡು ಮನೆತನದಲ್ಲಿ ಜನಿಸಿದ ಕೆ. ದಾಸಣ್ಣ ಆಳ್ವರವರು, ಪರಂಪರಾಗತವಾಗಿ ಪ್ರತೀ ವರ್ಷ ಡಿಸೇಂಬರ್ ತಿಂಗಳಲ್ಲಿ ನಡೆದುಕೊಂಡು ಬರುತ್ತಿರುವ “ಕುಳೂರು ಕಂಬಳ” ವನ್ನು ಶತಮಾನದಿಂದ ತನ್ನ ಹಿರಿಯರ ಮುಂದಾಳತ್ವ ಬಳಿಕ ಇವರೇ ಅದನ್ನ ಇದೀಗ ಮುಂದುವರಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು. ಪ್ರಗತಿಪರ ಕೃಷಿಕರಾಗಿದ್ದು, ಕೃಷಿ ಚಟುವಟಿಕೆಗಳ ಜೊತೆ, ಧಾರ್ಮಿಕ, ಸಾಮಾಜಿಕ ರಂಗಗಳಲ್ಲಿ ಸಕ್ರಿಯರಾಗಿದ್ದರು. ಕುಳೂರು ಕರ್ಬಂಡೆ ಶ್ರೀ ಧೂಮವತೀ ದೈವಸ್ಥಾನದ ಆಡಳಿತ ನಡೆಸುತ್ತಾ, ಕ್ಷೇತ್ರವನ್ನು ಮುನ್ನಡೆಸುತ್ತಿದ್ದರು. ಅಲ್ಲದೇ ಗ್ರಾಮದ ಮಾಗಣೆ ದೇವರಾದ ಐಲ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕೇಸರು, ಕ್ಷೇತ್ರ ನಿರ್ಮಾಣದಲ್ಲೂ ಹಲವಾರು ಕೊಡುಗೆಗಳನ್ನು ನೀಡಿದ್ದರು. ಬಂಟರ ಯಾನೆ ನಾಡವರ ಸಂಘದ ಮಂಜೇಶ್ವರ ಫಿರ್ಕದ ಅಧ್ಯಕ್ಷರಾಗಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಈಗಿನ ಕನ್ನಡ ಸರಕಾರಿ ಶಾಲೆಯಾಗಿರುವ ಕುಳೂರು ಶಾಲೆಯ ಸ್ಥಾಪಕರಳೊಬ್ಬರಾಗಿದ್ದಾರೆ. ಮೃತರ ನಿಧನಕ್ಕೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಊರ ಹಾಗೂ ಪರವೂರಿನ ಧಾರ್ಮಿಕ, ಸಾಮಾಜಿಕ ಮುಂದಾಳುಗಳು, ವಿವಿಧ ಸಂಘ ಸಂಸ್ಥೆಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!