ಕುಂಬಳೆ: ಇಲ್ಲಿನ ಕೊಯ್ಪಾಡಿ ಸಮುದ್ರ ತೀರದಲ್ಲಿ ತೆರೆಗಳೊಂದಿಗೆ ತೇಲಿ ಬಂದ ಬ್ಯಾರಲ್ ಗಳು ದಡಕ್ಕೆ ಅಪ್ಪಳಿಸಿದೆ. ಭಾನೂವಾರ ಸಂಜೆ 3 30ರ ವೇಳೆ ಸಮುದ್ರ ದಂಡೆಯಲ್ಲಿ ಬ್ಯಾರಲ್ ತೇಲುವುದನ್ನು ಕಂಡು ಶಂಕಿತನಾದ ಮತ್ಸ್ಯ ಕಾರ್ಮಿಕನೋರ್ವ ಕೂಡಲೇ ಕೋಸ್ಟಲ್ ಪೋಲೀಸರಿಗೆ ಮಾಹಿತಿ ನೀಡಿದನು. ಇದರಂತೆ ಪೋಲೀಸರು ಆಗಮಿಸಿ ಬ್ಯಾರಲ್ ದಡಕ್ಕೆ ತಂದು ಸಂರಕ್ಷಿಸಿದ್ದಾರೆ.
ಇತ್ತೀಚೆಗೆ ಕೇರಳ ಕರಾವಳಿ ತೀರದಲ್ಲಿ ಹೊತ್ತಿ ಉರಿದ ಹಡಗಿನಿಂದ ಸಮುದ್ರ ಪಾಲಾದ ಕಂಟೈನರಿನಿಂದ ಬಿದ್ದ ಬ್ಯಾರಲ್ ಇದಾಗಿರಬೇಕೆನ್ನಲಾಗಿದೆ. ಬ್ಯಾರಲ್ ನಲ್ಲಿ ನೈಟ್ರಿಕ್ ಏಸಿಡ್ ಇರುವುದೆಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ. ಮಾಹಿತಿಯನ್ನು ಬಂದರು ಇಲಾಖೆಗೆ ತಿಳಿಸಲಾಗಿದೆ. ಇದರಂತೆ ಮಂಗಳೂರಿನಿಂದ ಬಂದರು ಇಲಾಖಾ ಅಧಿಕಾರಿಗಳು ಆಗಮಿಸಿ ಬ್ಯಾರಲ್ ಕೊಂಡೊಯ್ಯವರೆಂದು ಪೋಲೀಸರು ತಿಳಿಸಿದ್ದಾರೆ.