ಮಂಜೇಶ್ವರ : ಶಾಲಾ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿಸುವ ಹಾಗೂ ಶಾಲೆಯ ಪ್ರಜಾಪ್ರಭುತ್ವಾತ್ಮಕ ಪರಂಪರೆಯನ್ನು ಗೌರವಿಸುವ ಉದ್ದೇಶದೊಂದಿಗೆ ಗಡಿ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕುಂಜತ್ತೂರು ಹಾಗೂ ಹೊಸಂಗಡಿ ಪೀಸ್ ಕ್ರಿಯೇಟಿವ್ ಶಾಲೆಗಳಲ್ಲಿ ಎರಡು ದಿನಗಳಲ್ಲಾಗಿ ಹಮ್ಮಿ ಕೊಂಡ ಶಾಲಾ ಸಂಸತ್ ಚುನಾವಣೆ 2025-26 ಬಹಳ ಅದ್ದೂರಿಯಾಗಿ ನೆರವೇರಿತು.
ವಿದ್ಯಾರ್ಥಿ ದೆಸೆಯಲ್ಲಿಯೇ ಸಾರ್ವತ್ರಿಕ ಚುನಾವಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಮಾದರಿಯಲ್ಲಿ ಚುನಾವಣೆ ನಡೆಯಿತು.
ಪ್ರಜಾಪ್ರಭುತ್ವವನ್ನು ಅಲಿಂಗಿಸಿ – ನಿಮ್ಮ ಆಯ್ಕೆ, ನಿಮ್ಮ ಹಕ್ಕು, ನಿಮ್ಮ ಧ್ವನಿ ಎಂಬ ಪ್ರಮೇಯದೊಂದಿಗೆ ವಿದ್ಯಾರ್ಥಿಗಳ ಅಭಿಪ್ರಾಯ ಆಲಿಸಿಕೊಂಡು ಈ ವರ್ಷವೂ ವಿದ್ಯಾಲಯದ ವಿಭಿನ್ನ ಹುದ್ದೆಗಳಿಗೆ ಚುನಾವಣೆಗಳು ನಡೆಯಿತು. ಈ ಚುನಾವಣೆ ಶಾಲಾ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ಜವಾಬ್ದಾರಿ ಹಾಗೂ ಸಮೂಹಚಿಂತನೆ ಬೆಳೆಸುವ ಪ್ರಮುಖ ಹಂತವಾಗಿದೆ. ವಿದ್ಯಾರ್ಥಿಗಳೆಲ್ಲರ ಭಾಗವಹಿಸುವಿಕೆ ಹಾಗೂ ಸಹಕಾರದಿಂದ ವಿದ್ಯಾರ್ಥಿಗ ಸಂಸತ್ ಚುನಾವಣಾ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.
ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ ಗುರುತಿನ ಪತ್ರ ತೋರಿಸಿ ಎಡಗೈ ತೋರು ಬೆರಳಿಗೆ ಶಾಯಿಯನ್ನು ಹಾಕಿಸಿ ಕೊಂಡು ಗೌಪ್ಯ ಮತದಾನದಲ್ಲಿ ಭಾಗವಹಿಸಿದರು.
ಶಾಲಾ ಪ್ರಾಂಶುಪಾಲ ಅಬ್ದುಲ್ ಖಾದರ್, ಕೋರ್ಡಿನೇಟರ್ ಆಯಿಷಾ, ಅಪ್ಸಾನ, ರೋಶ್ನಿ, ಶಿಕ್ಷಕಿಯರಾದ ಅನೂದ್, ಅಶೀಬ, ಸನ ಕೌಸರ್, ಮಹರೂಫ, ವೀಣಾ ಹಾಗೂ ಫಹದ್ ಉಪಸ್ಥಿತರಿದ್ದರು.