ಮಂಜೇಶ್ವರ: ಇಲ್ಲಿನ ಹೊಸಂಗಡಿ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ ನ 15 ನೇ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 14 ನೇ ವರ್ಷದ ಹೊಸಂಗಡಿ ಮೊಸರು ಕುಡಿಕೆ ಉತ್ಸವ ಆಗಸ್ಟ್ 15 ರಂದು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅಂದು ಬೆಳಗ್ಗೆ 8 30 ಕ್ಕೆ ಗಣಹೋಮ ,ಮಧ್ಯಾಹ್ನ 2 ರಿಂದ ಕೃಷ್ಣ ವೇಷ ಸ್ಪರ್ಧೆ , ನಂತರ ,ವಿವಿಧ ಆಟೋಟ ಸ್ಪರ್ಧೆ, ಸಂಜೆ 6.30 ಕ್ಕೆ ಧಾರ್ಮಿಕ ಸಭೆ ನಡೆಯಲಿದೆ.ಕಾರ್ಯಕ್ರಮದ ಆಮಂತ್ರಣ ಪತ್ರವು ಇತ್ತೀಚಿಗೆ ಹೊಸಂಗಡಿ ಅಯ್ಯಪ್ಪ ಕ್ಷೇತ್ರದಲ್ಲಿ ಬಿಡುಗೊಡೆಗೊಂಡಿತು.
ಈ ಸಂದರ್ಭದಲ್ಲಿ ಕ್ಲಬ್ ನ ಗೌರವಾಧ್ಯಕ್ಷರಾದ ನ್ಯಾಯವಾದಿ ನವೀನ್ ರಾಜ್ , ಪುರೋಹಿತರಾದ ತಿರುಮಲೇಶ್ ಆಚಾರ್ಯ, ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ರಜನಿ ಶ್ರೀಧರ್ ,ಅಯ್ಯಪ್ಪ ಕ್ಷೇತ್ರದ ಉಪಾಧ್ಯಕ್ಷರಾದ ನರೇಂದ್ರ ಹೆಗ್ಡೆ,ಚಂದ್ರಹಾಸ್ ಪೆಲಪ್ಪಾಡಿ , ಚಕ್ರವರ್ತಿ ಕ್ಲಬ್ ನ ಪ್ರದಾನ ಕಾರ್ಯದರ್ಶಿ ಸುರೇಶ ಗಾಣಿಜಾಲ್ , ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ಬಿನ ಅಧ್ಯಕ್ಷರಾದ ದಿವ್ಯಾರಾಜ್, ಪ್ರಧಾನಕಾರ್ಯದರ್ಶಿ ಸುಶಾಂತ್ ಎಸ್. ಜಿ, ಕೋಶಾಧಿಕಾರಿ ಸಂಜು ಹಾಗೂ ಅಯ್ಯಪ್ಪ ಕ್ಷೇತ್ರದ ಮತ್ತು ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ ನ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.