ಬಡವರನ್ನು ಮರೆತು ಬಂಡವಾಳಶಾಹಿಗಳ ಸೇವೆಯಲ್ಲಿ ನಿರತವಾದ ಎಡರಂಗ ಸರಕಾರ -ಕಾಂಗ್ರೆಸ್

ಕೇರಳದ ಎಡರಂಗ ಸರಕಾರವು ಬಡಜನರ ಹಿತಾಸಕ್ತಿ ಕಾಯುವ ತನ್ನ ಘೋಷಿತ ನೀತಿಯಿಂದ ಹಿನ್ನಡೆದು ಅದಾನಿ, ಸ್ಯಾಂಟಿಯಾಗೋ ಮಾರ್ಟಿನ್ ಮುಂತಾದ ಬಹುಕೋಟಿ ವ್ಯವಹಾರಗಳ ಶ್ರೀಮಂತ ಕುಳಗಳ ಸೇವೆಯಲ್ಲಿ ನಿರತವಾಗಿದೆಯೆಂದು ಕಾಂಗ್ರೆಸ್ ಆರೋಪಿಸಿದೆ.


ಆಡಳಿತದ ಸಕಲ ವಲಯಗಳಲ್ಲೂ ಸಂಪೂರ್ಣ ವಿಫಲವಾದ ಎಡರಂಗ ಸರಕಾರವು ಪೊಳ್ಳು ಭರವಸೆ ಮತ್ತು ಅತಿರಂಜಿತ ಪ್ರಚಾರಗಳನ್ನು ನಡೆಸುತ್ತಾ ಕಾಲ ಕಳೆಯುತ್ತಿದೆ. ಹೇಳತಕ್ಕ ಯಾವ ಒಳಿತಿನ ಕಾರ್ಯ ನಡೆಸದಿದ್ದರೂ, ತೆರಿಗೆ ಭಯೋತ್ಪಾದನೆ ಹಾಗೂ ದಂಡ ವಸೂಲಿ ಮಾತ್ರ ನಿರಂತರ ನಡೆಸುತ್ತಿದೆ. ಜನರಿಗೆ ಜನರಿಗೆ ಹೊರೆಯಾಗಿ ಮಾರ್ಪಟ್ಟ ಈ ಸರಕಾರದ ದುರಾಡಳಿತದ ದೆಸೆಯಿಂದ ಆರೋಗ್ಯ ವಲಯ ಸಂಪೂರ್ಣ ರೋಗಪೀಡಿತವಾಗಿದೆ. ಈ ಸರ್ಕಾರದ ವಿರುದ್ಧ ಜನತೆಯನ್ನು ಸಂಘಟಿಸಿಕೊಂಡು ನಿರ್ಣಾಯಕ ಹೋರಾಟಕ್ಕೆ ಕಾಂಗ್ರೆಸ್ ಇಳಿದಿದ್ದು, ಸರಕಾರದ ಪತನ ಸನ್ನಿಹಿತವಾಗಿದೆ ಎಂದು ಸೇವಾದಳ ರಾಜ್ಯ ಚೆಯರ್ ಮ್ಯಾನ್ ಶ್ರೀ ರಮೇಶನ್ ಕರುವಾಚೇರಿ ಹೇಳಿದ್ದಾರೆ.


ಆರೋಗ್ಯ ವಲಯದಲ್ಲಿ ಸರಕಾರ ತೋರುವ ಕಡೆಗಣನೆ ಹಾಗೂ ನಿರ್ಲಕ್ಷ್ಯ ಪ್ರತಿಭಟಿಸಿ ಮಂಜೇಶ್ವರ ಹಾಗೂ ಕುಂಬಳೆ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಆಶ್ರಯದಲ್ಲಿ ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆ ಮುಂಭಾಗ ನಡೆಸಿದ ಪ್ರಪಿಭಟನಾ ಧರಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಅಧ್ಯಕ್ಷತೆ ವಹಿಸಿದ್ದರು.


ಸಭೆಯಲ್ಲಿ ನೇತಾರರಾದ ಸೋಮಶಶೇಖರ ಜೆ ಎಸ್, ಮಂಜುನಾಥ ಆಳ್ವ, ಲಕ್ಷ್ಮಣ ಪ್ರಭು, ಉಮ್ಮರ್ ಬೋರ್ಕಳ, ಬಾಬು ಬಂದ್ಯೋಡು, ದಾಮೋದರ ಮಾಸ್ಟರ್, ಹನೀಫ್ ಪಡಿಂಞಾರ್, ಪುರುಷೋತ್ತಮ ಅರಿಬೈಲ್, ರವಿ ಪೂಜಾರಿ, ಸುಲೈಮಾನ್, ಬಿ.ಎಸ್. ಗಾಂಭೀರ್, ವಸಂತ ಮಾಸ್ಟರ್, ಜುನೈದ್ ಉರ್ಮಿ, ಸತ್ಯನ್ ಸಿ.ಉಪ್ಪಳ, ಹರ್ಷದ್ ವರ್ಕಾಡಿ, ಚಂದ್ರರಶೇಖರ ಶೆಟ್ಟಿ ಬೆಜ್ಜ, ಓಂ ಕೃಷ್ಣ, ಫಾರೂಕ್ ಶಿರಿಯ, ನಾಗೇಶ್ ಮಂಜೇಶ್ವರ, ಮೊಹಮ್ಮದ್ ಮಜಾಲ್, ಪಿ ಎಂ ಖಾದರ್ ಹಾಜಿ, ಗಣೇಶ್ ಪಾವೂರು, ನವೀನ್ ರೈ, ಬರ್ನಾರ್ಡ್ ಡಿ ಅಲ್ಮೇಡಾ, ಮೊಹಮ್ಮದ್ ಸೀಗಂಡಡಿ, ನಾಸಿರ್ ಮೊಗ್ರಾಲ್,ರವೀಂದ್ರ ಮಾಸ್ಟರ್ ಶೇಣಿ, ಹನೀಫ್ ಮೇರ್ಕಳ, ಯೋಗೀಶ್ ಉದ್ಯಾವರ, ರಂಜಿತ್ ಮಂಜೇಶ್ವರ, ಗೀತಾ ಬಂದ್ಯೋಡು, ತಾಹಿರಾ ಉಪ್ಪಳ, ಅಶ್ರಫ್ ಮುಟ್ಟಂ, ಜೆಸ್ಸಿ ಕಣ್ವತೀರ್ಥ,ರಾಜೇಶ್ ನಾಯ್ಕ್, ನಜೀಬುಲ್ಲಾ ಶೇಣಿ, ಆಮು ಅಡ್ಕಸ್ಥಳ, ಝಕರಿಯಾ ಶಾಲಿಮಾರ್, ಮೊಹಮ್ಮದ್ ಜೆ, ಫ್ರಾನ್ಸಿಸ್ ಡಿ ಸೋಜಾ,ಹುಸೈನ್ ಕುಬಣೂರು, ಯೂಸುಫ್ ಮಾಸ್ಟರ್, ಪೃಥ್ವಿರಾಜ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.


ಶ್ರೀ ಸುಂದರ ಆರಿಕ್ಕಾಡಿ ಸ್ವಾಗತಿಸಿ, ಶ್ರೀ ದಿವಾಕರ್ ಎಸ್ ಜೆ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!