ಕುಂಬಳೆ ಭ್ರಷ್ಟಾಚಾರ ಹಗರಣದ ಆರೋಪವನ್ನು ಎದುರಿಸುತ್ತಿರುವ ಕುಂಬಳೆ ಗ್ರಾಮ ಪಂಚಾಯತ್ ನ ಮುಸ್ಲಿಂ ಲೀಗ್ ಆಡಳಿತ ಸಮಿತಿಯನ್ನು ಪ್ರಶ್ನಿಸಿ ವಿರೋಧ ಪಕ್ಷ ಬಿಜೆಪಿ ನೀಡಿದ ಅವಿಶ್ವಾಸ ಗೊತ್ತುವಳಿ ಮೇ 26 ರಂದು ನಿರ್ಧಾರವಾಗಲಿದೆ.ಚುನಾವಣಾಧಿಕಾರಿಯಾದ ಬ್ಲಾಕ್ ಪಂಚಾಯತ್ ಕಾರ್ಯದರ್ಶಿ ಜೋನ್ ಎ ಡಿಕ್ರೂಸ್ ರವರಿಗೆ ಬಿಜೆಪಿ ಇತ್ತೀಚಿಗೆ ಅವಿಶ್ವಾಸ ಗೊತ್ತುವಳಿಯ ನೋಟೀಸು ನೀಡಿತ್ತು.ಕುಂಬಳೆ ಪಂಚಾಯತ್ ನಲ್ಲಿ ಕಳೆದ ನಾಲ್ಕು ವರೆ ವರ್ಷಗಳಿಂದ ನಡೆದ ಭ್ರಷ್ಟಾಚಾರದ ತನಿಖೆ ಯಾಗಬೇಕು .ಸರಕಾರಿ ಆಡಳಿತ ಯಂತ್ರ ದುರುಪಯೋಗ ,ಸರಕಾರಿ ಸೊತ್ತು ಕಬಳಿಸಿದವರಿಗೆ ಕಾನೂನಾತ್ಮಕ ಶಿಕ್ಷೆ ಯಾಗಬೇಕೆಂಬ ಬೇಡಿಕೆಯೊಂದಿಗೆ ಬಿಜೆಪಿ ಅವಿಶ್ವಾಸ ಗೊತ್ತುವಳಿ ಮಂಡಿಸಿದೆ.
23 ಸದಸ್ಯರಿರುವ ಗ್ರಾಮ ಪಂಚಾಯತ್ ನಲ್ಲಿ ಮುಸ್ಲಿಂ ಲೀಗ್ ಆಡಳಿತದಲ್ಲಿದ್ದರೂ ಲೀಗ್ ಗೆ ಸ್ಪಷ್ಟ ಬಹುಮತ ಗಳಿಲ್ಲ .ಮುಸ್ಲಿಂ ಲೀಗ್ ಗೆ 7 , ಮುಸ್ಲಿಂ ಲೀಗ್ ಬಂಡಾಯ ಸದಸ್ಯ 1, ಕಾಂಗ್ರೆಸ್ 2 , SDPI 1 ಆಡಳಿತ ನಡೆಸುತ್ತಿದೆ.ಬಿಜೆಪಿ ಸದಸ್ಯರಾದ ಪ್ರೇಮಲತಾ , ಎಸ್ ಸುಲೋಚನಾ ,ಶೋಭಾ ಎಸ್ ,ವಿದ್ಯಾ ,ಪುಷ್ಪಲತಾ ,ವಿವೇಕಾನಂದ್ ಶೆಟ್ಟಿ ,ಮೋಹನ ಕೆ , ಪ್ರೇಮವತಿ ಎಂಬ ಬಿಜೆಪಿ ಸದಸ್ಯರು ಸಹಿ ಹಾಕಿದ ಅವಿಶ್ವಾಸ ಗೊತ್ತುವಳಿ ನೋಟೀಸ್ ನೀಡಿದ್ದಾರೆ.CPIM ಸ್ವತಂತ್ರ ಬೆಂಬಲಿತ ಸದಸ್ಯರ ಸಹಿತ ಮೂರು ಸ್ಥಾನ ಹೊಂದಿದೆ.ಪಂಚಾಯತ್ ನ ಮುಸ್ಲಿಂ ಲೀಗ್ ನ ಭ್ರಷ್ಟಾಚಾರವನ್ನು CPIM ಮತ್ತು SDPI ವಿರೋಧಿಸುತ್ತಿದೆ.ಈ ನಿಟ್ಟಿನಲ್ಲಿ ಬಿಜೆಪಿ ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಈ ಎರಡು ಪಕ್ಷಗಳು ಯಾವ ರೀತಿ ಪ್ರತಿಕ್ರಿಯಿಸುತ್ತದೆ.ಎಂದು ಕಾದು ನೋಡಬೇಕಾಗಿದೆ.
ಬಿಜೆಪಿ ಮಂಡಿಸಿದ ವಿಶ್ವಾಸ ಗೊತ್ತುವಳಿಗೆ ವಿಪಕ್ಷಗಳೆಲ್ಲವೂ ಕೈ ಜೋಡಿಸಿದರೆ ಮುಸ್ಲಿಂ ಲೀಗ್ ನ ಆಡಳಿತ ಪತನವಾಗುವುದು ಖಚಿತ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗಿ ನಡೆಯುತ್ತಿದೆ.
ಕೆಲವೇ ತಿಂಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಗೆ ಮೊದಲು ಕುಂಬಳೆ ಪಂಚಾಯತ್ ನಲ್ಲಿ ಉಂಟಾದ ಈ ರಾಜಕೀಯ ಅಸ್ಥಿರತೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.