ಕುಂಜತ್ತೂರು ಎಲ್.ಪಿ. ಶಾಲೆಯ ಸಮೀಪದಲ್ಲಿ ಹೈವೋಲ್ಟೇಜ್ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಥಾಪನೆ . ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಮಂಜೇಶ್ವರ: ಕೇರಳ-ಕರ್ನಾಟಕ ಗಡಿ ಪ್ರದೇಶದ ಕುಂಜತ್ತೂರು ಸರ್ಕಾರಿ ಎಲ್.ಪಿ. ಶಾಲೆಯ ಪ್ರವೇಶ ದ್ವಾರದ ಸಮೀಪದಲ್ಲಿ ಸ್ಥಾಪಿಸಲಾದ ಹೈವೋಲ್ಟೇಜ್ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಶಾಲೆಗೆ ಆಗಮಿಸುವ ನೂರಾರು ಮಕ್ಕಳ ಪ್ರಾಣಭದ್ರತೆಗೆ ಇದು ಅಪಾಯಕಾರಿಯಾಗಿರುವುದಾಗಿ ಪೋಷಕರು ಹಾಗೂ ಊರವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ

ಶಾಲೆಯ ಕಟ್ಟಡಕ್ಕೆ ಸಮೀಪದಲ್ಲಿಯೇ ಈ ಟ್ರಾನ್ಸ್‌ಫಾರ್ಮರ್ ಸ್ಥಾಪನೆಯಾಗಿದ್ದು, ಯಾವುದೇ ಸಮಯದಲ್ಲಾದರೂ ವಿದ್ಯುತ್ ದುರಂತವು ದೈಹಿಕ ಹಾನಿಗೆ ಕಾರಣವಾಗಬಹುದೆಂಬ ಭೀತಿ ಎದುರಾಗಿದೆ. ಶಾಲಾ ಸಮಯದಲ್ಲಿ ಮಕ್ಕಳು ಆಟವಾಡುವಾಗ ಅಥವಾ ಗುಂಪುಗಳಾಗಿ ಸಂಚರಿಸುವಾಗ ಇದೀಗ ಸ್ಥಾಪನೆಯಾಗಿರುವ ಹೈವೋಲ್ಟೇಜ್ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸಮೀಪ ತೆರಳುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತುರ್ತು ನಿರ್ವಹಣೆ ಅಗತ್ಯವಾಗಿದೆ. ವಿಶೇಷವಾಗಿ ಮಳೆಯಾಗುವ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್‌ ಅಥವಾ ವಿದ್ಯುತ್ ದೋಷಗಳ ಸಂಭವ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಭದ್ರತೆಗೆ ಧ್ವನಿ ಎಬ್ಬಿಸುತ್ತಿದೆ. ಶಾಲಾ ಆವರಣವೇ ಆಟವಾಡಲು ಹಾಗೂ ಮಕ್ಕಳಿಗೆ ಸಮೂಹ ಚಟುವಟಿಕೆಗಳಿಗೆ ಬಳಸಲಾಗುತ್ತಿದ್ದು, ಟ್ರಾನ್ಸ್‌ಫಾರ್ಮರ್‌ ಈ ಭಾಗಕ್ಕೆ ಅತಿ ಸಮೀಪದಲ್ಲಿ ಸ್ಥಾಪಿತಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ದಿನಗಳ ಹಿಂದೆ ಇದೇ ರೀತಿಯ ಬೇ ಜವಾಬ್ದಾರಿಯಿಂದ ಕೇರಳದ ಶಾಲಾ ಪರಿಸರದಲ್ಲಿ ಸಂಭವಿಸಿದ ಒಂದು ಅಪಾಯಕಾರಿಯಾದ ವಿದ್ಯುತ್ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವುದು ಈ ಬಗ್ಗೆ ಬೇಹುಗಾರಿಕೆ ಮತ್ತು ಎಚ್ಚರಿಕೆ ಹೆಚ್ಚಿಸಿದೆ.

ಸ್ಥಳೀಯ ಪ್ರಾಧಿಕಾರಗಳು ಹಾಗೂ ವಿದ್ಯುತ್ ಇಲಾಖೆಯು ತಕ್ಷಣವೇ ಈ ಬಗ್ಗೆ ಎಚ್ಚೆತ್ತು ಇದರ ವಿರುದ್ಧ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸುರಕ್ಷತೆ ಖಚಿತಪಡಿಸಿಕೊಳ್ಳಬೇಕೆಂಬುದು ವಿದ್ಯಾರ್ಥಿಗಳು, ಪೋಷಕರು ಹಾಗೂ ಊರವರು ಒತ್ತಾಯಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!