ಮಂಜೇಶ್ವರ : ಪ್ರಸಿದ್ಧ ಸ್ಯಾಕ್ಸೋಫೋನ್ ವಾದಕ ಶ್ರೀ ಜಯರಾಮ್ ಮಂಜೇಶ್ವರರವರಿಗೆ ಕೆನಡಾದ ಇತಿಹಾಸ ಪ್ರಸಿದ್ಧ ವರಸಿತ್ತಿ ವಿನಯಾಗರ್ ಹಿಂದೂ ದೇವಸ್ಥಾನದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ಶಿರೋಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಇವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು .ಮೂಲತಃ ಮಂಜೇಶ್ವರದವರಾದ ಇವರು ಕಳೆದ ಹಲವಾರು ವರ್ಷಗಳಿಂದ ಸ್ಯಾಕ್ಸೋಫೋನ್ ವಾದಕರಾಗಿ ಜನಪ್ರಿಯರಾಗಿದ್ದಾರೆ.