ನಡಕೊಂಡು ಹೋಗುತ್ತಿದ್ದಯುವಕ ಶೂಟೌಟ್ ತಗುಲಿ ಗಂಭೀರ

ಮಂಜೇಶ್ವರ : ದಾರಿಯಲ್ಲಿ ನಡಕೊಂಡು ಹೋಗುತ್ತಿದ್ದ ಯುವ ಅಡಿಕೆ ವ್ಯಾಪಾರಿಗೆ ಗುಂಡೇಟು ತಗಲಿರುವ ಘಟನೆ ಕೇರಳದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಾಟಕ ಗಡಿಭಾಗ ಮುಡಿಪು ಸಮೀಪದ ಕಜೆಪದವು ಎಂಬಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ.


ಬಾಕ್ರಬೈಲ್ ನಡೀಬೈಲು ನಿವಾಸಿ ಸವಾದ್ (20) ಎಂಬಾತ ಶೂಟೌಟ್ ತಗುಲಿ ಗಾಯಗೊಂಡವರು. ನಿನ್ನೆ ಸಂಜೆ ವೇಳೆ ಕಾಡಿನ ನಡುವೆ ದಾರಿಯಲ್ಲಿ ತೆರಳುವ ಸಂದರ್ಭ ಕಜೆಪದವು ತಿರುವಿನಲ್ಲಿ ಈ ಘಟನೆ ನಡೆದಿದ್ದು, ಇದರಿಂದ ಕಾಲಿಗೆ ಗಂಭೀರ ಗಾಯಗೊಂಡ ಸಾವಾದ್ ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಾಣಿ ಬೇಟೆ ಬಂದವರು ಹಂದಿಗೆ ಶೂಟೌಟ್ ಮಾಡಲು ದಾರಿಯಲ್ಲಿ ‌ ಶೂಟ್ ಆಗುವ ವಸ್ತು ಇಟ್ಟಿದ್ದರು ಎನ್ನಲಾಗಿದೆ., ಇದನ್ನು ಗಮಿನಿಸದ ಸವಾದ್ ನಡಕೊಂಡು ಹೋಗುವ ವೇಳೆ ಮೆಟ್ಟಿದ ಕಾರಣ ಅವರಿಗೆ ತಗುಲಿರುವ ಸಾಧ್ಯತೆ ಇದೆ. ಇದರಿಂದ ಅವರು ಗಾಯ ಗೊಂಡು ಆಸ್ಪತ್ರೆಗೆ ದಾಖಲು ಆಗಿದ್ದಾರೆ. ಶೂಟೌಟ್ ಮಾಡಿದ ವ್ಯಕ್ತಿಯ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.
ಮಂಜೇಶ್ವರ ಠಾಣಾ ಪೋಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದು ತನಿಖೇ ಕೈಗೆತ್ತಿಕೊಂಡಿದ್ದಾರೆ.
ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!