ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೂಡ್ಲು ಕಾರ್ಯ ಕ್ಷೇತ್ರದ ಒಕ್ಕೂಟ ಸಭೆಯು ಭಾನುವಾರ ವನಿತಾ ಭವನ ಕೂಡ್ಲುನಲ್ಲಿ ನಡೆಯಿತು . ಒಕ್ಕೂಟದ ಅಧಕ್ಷರಾದ ಶ್ರೀಮತಿ ಪ್ರಮೀಳಾ ಕೂಡ್ಲು ದೀಪ ಬೆಳಗಿಸಿ ಉದ್ಘಾಟಿಸಿದರು . ಈ ಒಕ್ಕೂಟ ಸಭೆಯಲ್ಲಿ ವಲಯದ ಮೇಲ್ವಿಚಾರಕರದ ಶ್ರೀ ಗೋಪಾಲಕೃಷ್ಣ , ಕೃಷಿ ಮೇಲ್ವಿಚಾರಕರದ ಶ್ರೀ ಜಯರಾಮ , ಕೂಡ್ಲು ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಜ್ಯೋತಿ ಮಾಯಿಪಾಡಿ , VLA ಸೌಮ್ಯ , ಹಾಗೂ ಒಕ್ಕೂಟದ ಪದಾಧಿಕಾರಿಗಳು , ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು .
ಈ ಸಂದರ್ಭದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಕೃಷಿ ಮೇಲ್ವಿಚಾರಕರಾದ ಶ್ರೀ ಜಯರಾಮ ಅವರು ಕೃಷಿ ಬಗ್ಗೆ ಸಂಘದ ಸದಸ್ಯರಿಗೆ ಮಾಹಿತಿ ನೀಡಿದರು . ಪರಿಸರ ಮಾಹಿತಿ ಕಾರ್ಯಕ್ರಮದ ಸಲುವಾಗಿ ಕೂಡ್ಲು ಗೋಪಾಲಕೃಷ್ಣ ಹೈಸ್ಕೂಲ್’ನಲ್ಲಿ ಗಿಡನಾಟಿ ಕಾರ್ಯಕ್ರಮ ಮಾಡಲಾಯಿತು .
ಒಕ್ಕೂಟದ ಸಭೆಯ ಜಾಬ್ದಾರಿಯನ್ನ ಜಗದಂಬಾ ಸ್ವ-ಸಹಾಯ ಸಂಘ ಕಾಳ್ಯಾಂಗಾಡ್ ಸಂಘದವರು ವಹಿಸಿಕೊಂಡರು . ಜಗದಂಬಾ ಸಂಘದ ವರದಿಯನ್ನ ಹಿತಾಕ್ಷಿ ಅವರು ಮಂಡಿಸಿದರು . ಈ ಒಕ್ಕೂಟ ಸಭೆಯನ್ನ ಜಗದಂಬಾ ಸಂಘದ ಸದಸ್ಯರಾದ ಪ್ರಪುಲ್ಲ ಅವರು ನಿರೂಪಿಸಿದರು . ಜಗದಂಬಾ ಸಂಘದ ಸದಸ್ಯರಾದ ಹೇಮಾವತಿ ಅವರು ಸ್ವಾಗತಿಸಿ , ಜಗದಂಬಾ ಸಂಘದ ಸದಸ್ಯರಾದ ಶಾಂತ ಕುಮಾರಿ ವಂದಿಸಿದರು .