ಮಾಜಿ ಸಿ ಎಂ ವಿ.ಎಸ್.ರಿಗೆ ಉಪ್ಪಳದಲ್ಲಿ ಸಂತಾಪ, ಮೌನ ಮೆರವಣಿಗೆ

ಉಪ್ಪಳ : ಹಿರಿಯ ಸಿ..ಪಿ.ಐ(ಎಂ) ಮುಖಂಡ. ಮಾಜಿ ಮುಖ್ಯ ಮಂತ್ರಿ.ವಿ. ಎಸ್.ಅಚ್ಯುತಾನಂದನವರ ನಿಧನಕ್ಕೆ ಸಂತಾಪ ಸೂಚಿಸಿ ಸಿ.ಪಿ.ಐ.(ಎಂ) ಉಪ್ಪಳ ಲೋಕಲ್ ಕಮೀಟಿಯಿಂದ ಉಪ್ಪಳ ದಲ್ಲಿ ಮೌನ ಮೆರವಣಿಗೆ ನಡೆಸಲಾಯಿತು.

ಈ ಕಾರ್ಯಕ್ರಮವನ್ನು ಏರಿಯಾ ಕಮಿಟಿ ಸದಸ್ಯರಾದ ಸಾದಿಕ್ ಚೆರುಗೋಲಿ ಉದ್ಘಾಟಿಸಿ ಮಾತನಾಡಿದರು.ಇದರ ಅಧ್ಯಕ್ಷತೆ ಯನ್ನು ಲೋಕಲ್ ಕಮೀಟಿ ಸದಸ್ಯ ಉಮೇಶ್ ಶೆಟ್ಟಿ ಬೋಳ್ಳಾರು ವಹಿಸಿದರು.

ಉಪ್ಪಳ ಲೋಕಲ್ ಕಮಿಟಿ ಸದಸ್ಯರಾದ ಪ್ರವೀಣ್ ಕಣ್ಣಾಟಿಪರೆ. ಸರೋಜ ಶಾಂತಿಯೋಡು. ಪಾರ್ವತಿ ಬೇಕೂರು. ಅಬ್ದುಲ್ ಅಜೀಜ್ ಉಪ್ಪಳ ಭಾಗವಹಿಸಿದ್ದರು ಸಿ.ಪಿ. ಐ (ಎಂ) ಲೋಕಲ್ ಕಾರ್ಯದರ್ಶಿ ರವಿಂದ್ರ ಶೆಟ್ಟಿ ಬೋಳ್ಳಾರು ಸ್ವಾಗತಿಸಿ. ಸಜಾನ್ ಫಿರ್ದೂಶ್ ನಗರ ವಂದಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!