ಮೊನ್ನೆ ನಿಧನರಾದ ಕೇರಳದ ಮಾಜಿ ಮುಖ್ಯ ಮಂತ್ರಿ, ಸಿಪಿಐಎಂ ಹಿರಿಯ ನೇತಾರ ವಿ ಎಸ್ ಅಚ್ಚುತಾನಂದನ್ ರವರ ನಿಧನಕ್ಕೆ ಸಿಪಿಐಎಂ ಮೀoಜ ಪಂಚಾಯತಿನ ಲೋಕಲ್ ಸಮಿತಿ ನೇತೃತ್ವದಲ್ಲಿ ಮೀಯಪದವಿನಲ್ಲಿ ಸರ್ವಪಕ್ಷ ಸಂತಾಪ ಸಭೆ ನಡೆಯಿತು.
ಸಿಪಿಎಂ ನಾಯಕ ಕೆ ಆರ್ ಜಯಾನಂದ, ಸಿಪಿಐ ನೇತಾರ ರಾಮಕೃಷ್ಣ ಕಡoಬಾರ್, BJP ನಾಯಕ ಬ್ಲಾಕ್ ಪಂಚಾಯತ್ ಸದಸ್ಯ ಶ್ರೀ ಕೆ ವಿ ರಾಧಾಕೃಷ್ಣ, ಕಾಂಗ್ರೆಸ್ ನಾಯಕ ಶ್ರೀ ದಾಮೋದರ ಮಾಸ್ಟರ್, ಮಾಣಿ ಕಾಂಗ್ರೆಸ್ ನಾಯಕ ಶ್ರೀ ರಾಘವ ಚೇರಲ್, ಎಸ್ ಡಿ ಪಿ ಐ ನಾಯಕ ನೌಫಲ್ ಚಿಗುರುಪಾದೆ, ಹರೀಶ್ ಶೆಟ್ಟಿ ಕಡoಬಾರ್, ಡಿ ಕಮಲಾಕ್ಷ,ಕರುಣಾಕರ ಶೆಟ್ಟಿ ಮಂಜೇಶ್ವರ, ಬಾಳಪ್ಪ ಬಂಗೇರ, ಪಂಚಾಯತ್ ಸದಸ್ಯರುಗಳಾದ ಜನಾರ್ಧನ ಪೂಜಾರಿ, ಸರಸ್ವತಿ ಎಲಿಯಾಣ ಎಂಬವರು ಮಾತನಾಡಿದರು.
ಸಭೆಯಲ್ಲಿ ಸಿಪಿಎಂ ಹಿರಿಯ ನೇತಾರ ಬಿ ಸದಾಶಿವ ರೈ ಅಧ್ಯಕ್ಷತೆವಹಿಸಿದರು. ರಾಮಚಂದ್ರ ಟಿ ಸ್ವಾಗತಿಸಿ ಲೋಕೇಶ್ ಚಿನಾಲ ವಂದಿಸಿದರು. ಸಭೆಯ ನಂತರ ಮೀಯಪದವಿನಲ್ಲಿ ಮೌನ ಮೆರವಣಿಗೆ ನಡೆಯಿತು.