ಖಾಸಗಿ ಬಸ್ಸುಗಳು ಪರಸ್ಪರ ಡಿಕ್ಕಿ,12 ಮಂದಿ ಗಾಯ,ಬಸ್ಸು ಚಾಲಕ ಗಂಭೀರ

ಕಾಸರಗೋಡು ನಗರದ ಬ್ಯಾಂಕ್ ರಸ್ತೆಯಲ್ಲಿ ಬಾನುವಾರ ಸಂಜೆ ಖಾಸಗಿ ಬಸ್ಸುಗಳು ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ 12 ಮಂದಿ ಗಾಯಗೊಂಡಿದ್ದು, ಬಸ್ಸು ಚಾಲಕ ಗಂಭೀರ ಗಾಯಗೊಂಡಿದ್ದಾರೆ.

ಗಂಭೀರ ಗಾಯಗೊಂಡ ಮಧೂರು ಬಸ್ಸು ಚಾಲಕ ಮಧುಸೂಧನ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಸರಗೋಡು ಪೊಲೀಸ್ ಠಾಣಾ ಪರಿಸರದಲ್ಲಿ ಬಾನುವಾರ ಸಂಜೆ 4.30 ಗಂಟೆಯ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ವಿವಾಹ ಸಮಾರಂಭದ ಬಸ್ಸು ಹಾಗೂ ಖಾಸಗಿ ಬಸ್ಸು ಪರಸ್ಪರ ಡಿಕ್ಕಿ ಹೊಡೆದಿದೆ.

ಅಗ್ನಿಶಾಮಕ ದಳ ಆಗಮಿಸಿ ಬಸ್ಸು ಚಾಲಕ ಮಧುಸೂದನರನ್ನು ಹೊರಕ್ಕೆ ತೆಗೆದಿದೆ. ಪರಸ್ಪರ ಡಿಕ್ಕಿ ಹೊಡೆದ ಬಸ್ಸುಗಳನ್ನು ಕ್ರೇನ್ ಉಪಯೋಗಿಸಿ ಹೊರ ತೆಗೆಯಲಾಯಿತು. ಗಾಯಾಳುಗಳನ್ನು ಬ್ಯಾಂಕ್ ರೋಡ್ ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!