ಮಂಜೇಶ್ವರದ ಅಂಬಿತ್ತಾಡಿಯಲ್ಲಿ ದೈತ್ಯಾಕಾರದ ಮರವೊಂದು ಧಾರಾಶಾಯಿ.ಅಸ್ತವ್ಯಸ್ತಗೊಂಡ ಸಂಚಾರ ವ್ಯವಸ್ಥೆಯನ್ನು ಸ್ಥಳೀಯರ ಸಹಕಾರದೊಂದಿಗೆ ಸರಿಪಡಿಸಿದ ವಾರ್ಡ್ ಸದಸ್ಯೆ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತು ವ್ಯಾಪ್ತಿಯ 7ನೇ ವಾರ್ಡ್ ಅಂಬಿತ್ತಾಡಿಯಲ್ಲಿ ದೈತ್ಯಾಕಾರದ ಮರವೊಂದು ರಸ್ತೆಗೆ ಬಿದ್ದು ಸುಮಾರು ವಾರಗಳ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ದಿನನಿತ್ಯದ ಓಡಾಟದಲ್ಲಿ ಸಮಸ್ಯೆ ಎದುರಿಸುತ್ತಿದ್ದ ಸ್ಥಳೀಯರಿಗೆ ಬಹಳ ಅಡಚಣೆಯಾಗಿತ್ತು.

ರಸ್ತೆಗೆ ಅಡ್ಡವಾಗಿ ಬಿದ್ದ ಈ ಮರ, ಸ್ಥಳೀಯ ನಿವಾಸಿಗಳ ಮತ್ತು ವಾಹನ ಸವಾರರ ಸಂಚಾರಿ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿತ್ತು. ಸಂಬಂಧಿತ ಇಲಾಖೆಗಳಿಂದ ನಿರೀಕ್ಷಿಸಿದ ನೆರವು ತಡವಾಗುತ್ತಿದ್ದ ಸಂದರ್ಭದಲ್ಲಿ 7ನೇ ವಾರ್ಡ್‌ನ ಸದಸ್ಯೆ ಶ್ರೀಮತಿ ರುಬೀನಾ ಅವರು ಮುಂದಾಗಿದ್ದು, ಊರಿನ ಯುವಕರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸುವ ಕಾರ್ಯದಲ್ಲಿ ನೇತೃತ್ವ ವಹಿಸಿದರು.

ತೆರವು ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ರಸ್ತೆಯಲ್ಲಿ ವಾಹನ ಸಂಚಾರ ಮತ್ತೆ ಆರಂಭಗೊಂಡಿದ್ದು, ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ. ಶ್ರೀಮತಿ ರುಬೀನಾ ಅವರ ಈ ಜನಪರ ಕಾಳಜಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!