ಕಾಸರಗೋಡು:ಕಾಞಂಗಾಡ್ ರಾಜ್ಯ ಹೆದ್ದಾರಿಯಲ್ಲಿ ಬರುವ ಚಾಮುಂಡಿಕುನ್ನು ಪರಿಸರದಲ್ಲಿ ವ್ಯಾಪಕವಾಗಿ ಸುರಿದ ಮಳೆ ಹಾಗೂ ಬಲವಾಗಿ ಬೀಸಿದ ಗಾಳಿಯ ಪರಿಣಾಮ ಚಿತ್ತಾರಿ ವಿಲೇಜ್ ಆಫೀಸ್ ಬಳಿಯ ಬೃಹತ್ ತ್ತಾದ ಮರವೊಂದು ಧರೆಗೆ ಉರುಳಿದೆ .
ಪರಿಣಾಮ ಕಾರೊಂದು ಜಕ್ಕಮ್ ಆಗಿದೆ ಜೊತೆಗೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ರೆಂಬೆ ಕೊಂಬೆಗಳು ಬಿದ್ದ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ರೋಡ್ ಗೆ ಬಿದ್ದಿದೆ . ಪರಿಣಾಮ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಾಸ ಉಂಟಾಯಿತು . ಕೆಲ ದಿನಗಳ ಹಿಂದೆ ಈ ಮರವನ್ನು ತೆರವು ಮಾಡಬೇಕ್ಕೆನ್ನುವ ನಿರ್ದೇಶವನ್ನು ವಿದ್ಯುತ್ ಇಲಾಖೆಯವರು ನೀಡಿದರು , ವಿಲೇಜ್ ಆಫೀಸ್ ರ್ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ .
ಒಂದು ವೇಳೆ ಅಲ್ಲಿಂದ ಮರವನ್ನು ತೆರವು ಮಾಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ . ಮರ ಧರೆಗೆ ಉರುಳುವ ಸಮಯದಲ್ಲಿ ಯಾರು ಅದರ ಬಳಿ ಇರದ ಕಾರಣ ಯಾವುದೇ ಸಾವು ನೋವು ಸಂಭವಿಸಲಿಲ್ಲ .