ವಾರ್ಡ್ ಮರು ನಿರ್ಣಯದಲ್ಲಿ ಸಿಪಿಎಂ ಯಾವ ಕೀಳು ರಾಜಕೀಯ ಆಟವಾಡಿದರೂ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ರಾಜ್ಯದಾದ್ಯಂತ ಉತ್ತಮ ಸಾಧನೆಗೈಯಲಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಎಡರಂಗದ ದುರಾಡಳಿತದಿಂದ ಬೇಸತ್ತ ಜನಸಾಮಾನ್ಯರು ಸಿಪಿಎಂಗೆ ಸರಿಯಾದ ಉತ್ತರ ಕೊಡುವ ಅವಕಾಶಕ್ಕೆ ಕಾಯುತ್ತಿದ್ದಾರೆ. ಜನತೆಯ ರೋಷ ಈ ಚುನಾವಣೆಯಲ್ಲಿ ಪ್ರತಿಫಲಿಸಲಿದೆ ಎಂದು ಅವರು ಹೇಳಿದ್ದಾರೆ. ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಮಂಡಲ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಬಾಬು ಬಂದ್ಯೋಡು ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೇತಾರರಾದ ಫಾರೂಕ್ ಶಿರಿಯ, ಗೀತಾ ಬಂದ್ಯೋಡು, ಬರ್ನಾರ್ಡ್ ಡಿ’ಅಲ್ಮೇಡಾ, ನವೀನ್ ರೈ, ತಾಹಿರಾ, ರಶೀದ್ ಮಾಸ್ಟರ್, ಅಶ್ರಫ್ ಮುಟ್ಟಂ, ಯೂಸುಫ್, ರಮೇಶ್, ಹನೀಫ್, ಶಿಹಾಬ್ ಎಂಕೆ, ಜಾವೇದ್, ಶಿಹಾಬ್ ಮಳ್ಳಂಗೈ, ರಿಯಾಸ್, ಇಸ್ಮಾಯಿಲ್, ಇಬ್ರಾಹಿಂ ಕೋಟಾ, ಹಾರಿಸ್ ಪಾರಕಟ್ಟೆ, ಇಬ್ರಾಹಿಂ ಇಚ್ಲಂಗೋಡು, ಬಾಬು, ಕುಂಞಾಲಿ, ತುಳಸೀಧರನ್ ಮುಂತಾದವರು ಉಪಸ್ಥಿತರಿದ್ದರು