ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಕಾಸರಗೋಡು ತಾಲೂಕು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕಾಸರಗೋಡು ವಲಯದ ಅಡ್ಕತ್ತಬೈಲು ಕಾರ್ಯ ಕ್ಷೇತ್ರದಲ್ಲಿ BEMHS ಶಾಲೆಯ ಹತ್ತನೇ ತರಗತಿಯ ಮಕ್ಕಳಿಗೆ ಸ್ವಾಸ್ತ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮ ನಿನ್ನೆ BEMHS ಶಾಲೆಯಲ್ಲಿ ನಡೆಯಿತ್ತು .
ಕಾಸರಗೋಡು ತಾಲೂಕಿನ ಭಜನಾ ಪರಿಷತ್ ಅಧಕ್ಷರಾದ ಶ್ರೀ ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸಿ ಉದ್ಘಾಟಿಸಿದರು . ಮಕ್ಕಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದ ಬಗ್ಗೆ ಹಾಗೂ ಯೋಜನೆಯಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿಯನ್ನ ನೀಡಿ ಶುಭ ಹಾರೈಸಿದರು . ಅಡ್ಕತ್ತಬೈಲು ಕಾರ್ಯ ಕ್ಷೇತ್ರದ ಒಕ್ಕೂಟ ಅಧಕ್ಷರಾದ ಶ್ರೀಮತಿ ಜಯಲಕ್ಷ್ಮಿ ಅಧಕ್ಷ ಸ್ಥಾನ ವಹಿಸಿದರು . ಜನ ಜಾಗೃತಿ ವೇದಿಕಯ ಸದಾಸ್ಯರದ ನಿವೃತ್ತ ಪ್ರಾಂಶುಪಾಲರಾದ ಶ್ರೀ ಶ್ರೀನಾಥ್ ಅವರು ಮಕ್ಕಳಿಗೆ ದುಷ್ಟದ ಬಗ್ಗೆ ಮತ್ತು ಅದರಿಂದಾಗುವ ದುಷ್ಪರಿಣಾಮಗಳು , ಬಗ್ಗೆ ಸವಿ ವಿವರವಾದ ಮಾಹಿತಿ ನೀಡಿದರು .
ಈ ಸಂದರ್ಭದಲ್ಲಿ ಹಲವು ಗಣ್ಯರನ್ನ ಸನ್ಮಾನಿಸಲಾತು . ಈ ಸಂದರ್ಭದಲ್ಲಿ ನಿವೃತ್ತ ವಾಯು ಸೇನಾಧಿಕಾರಿ ಶ್ರೀ ತಿರುಮಲೇಶ ಭಟ್ , ಶಾಲಾ ಮುಖ್ಯೋಪಾಧ್ಯರಾದ ಶ್ರೀ ಗಣೇಶ್. ಕೆ ,ಕಾಸರಗೋಡು ವಲಯದ ಮೇಲ್ವಿಚಾರಕರಾದ ಶ್ರೀ ಗೋಪಾಲಕೃಷ್ಣ , ಅಡ್ತತ್ತಬೈಲು ಸೇವಾಪ್ರತಿನಿಧಿ ಶ್ರೀಮತಿ ಶೋಭ , ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು . ಈ ಕಾರ್ಯಕ್ರಮಕ್ಕೆ ಕಾಸರಗೋಡು ವಲಯದ ಮೇಲ್ವಿಚಾರಕರಾದ ಶ್ರೀ ಗೋಪಾಲಕೃಷ್ಣ ಸ್ವಾಗತಿ , ಅಡ್ಕತ್ತಬೈಲು ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶೋಭ ವಂದಿಸಿದರು .