ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲೊಬ್ಬರಾದ ಸರ್ ಎಂ .ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ ಮತ್ತು ಕನ್ನಡ ಪತ್ರಕರ್ತರೊಂದಿಗೆ ಸೌಹಾರ್ದ ಸಂವಾದ ಕಾರ್ಯಕ್ರಮವು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಸೆ. 15 ರಂದು ಸಂಜೆ 4 ಗಂಟೆಗೆ ಕಾಸರಗೋಡು ಅಡ್ಕತ್ತಬೈಲಿನಲ್ಲಿರುವ ಹೋಟೆಲ್ ಉಡುಪಿ ಗಾರ್ಡನ್ ನ ಮಥುರಾ ಸಭಾಂಗಣದಲ್ಲಿ ನಡೆಯಲಿರುವುದು.

ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ರಾಧಾಕೃಷ್ಣ ಕೆ .ಉಳಿಯುತ್ತಡ್ಕ ಅವರು ಮುಖ್ಯ ಅತಿಥಿಯಾಗಿದ್ದು ಸರ್ ಎಂ. ವಿಶ್ವೇಶ್ವರಯ್ಯನವರ ಬದುಕು, ವ್ಯಕ್ತಿತ್ವ ,ಸಾಧನೆಗಳ ಕುರಿತು ಮಾತನಾಡುವರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು.
ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು,ಕ.ಸಾ.ಪ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ , ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಪತ್ರಕರ್ತ, ಯಕ್ಷಗಾನ ಕಲಾವಿದ ವಿ.ಜಿ ಕಾಸರಗೋಡು ಉಪಸ್ಥಿತರಿರುವರು.

ಬಳಿಕ ಕಾಸರಗೋಡಿನ ಕನ್ನಡ ಪತ್ರಕರ್ತರೊಂದಿಗೆ ಸೌಹಾರ್ದ ಸಂವಾದ ಕಾರ್ಯಕ್ರಮ ನಡೆಯುವುದು. ಎ.ಆರ್ ಸುಬ್ಬಯ್ಯಕಟ್ಟೆ, ಪ್ರದೀಪ್ ಬೇಕಲ್, ಅಚ್ಯುತ ಚೇವಾರು, ಸುಬ್ರಹ್ಮಣ್ಯ ಭಟ್ ಪೆರಿಯಪ್ಪಾಡಿ, ದೇವದಾಸ್ ಪಾರೆಕಟ್ಟೆ, ಕೆ. ಗಂಗಾಧರ ತೆಕ್ಕೇ ಮೂಲೆ, ಜಗನ್ನಾಥ ಶೆಟ್ಟಿ ಪಿ.,ಕೆ, ಪುರುಷೋತ್ತಮ ಪೆರ್ಲ, ಪುರುಷೋತ್ತಮ ಭಟ್ ,ಸ್ಟೀಫನ್ ಕ್ರಾಸ್ತ, ಶ್ಯಾಮಪ್ರಸಾದ್ ಎಸ್, ಅಶೋಕ.ಕೆ ,ಪುರುಷೋತ್ತಮ ನಾಯಕ್, ಪ್ರಕಾಶ್ ಮಂಜೇಶ್ವರ, ಗಣೇಶ್ ಪೈಕ, ಜೋನ್ ಡಿ’ಸೋಜ, ಸಂಜೀವ. ಬಿ ,ರತನ್ ಕುಮಾರ್ ಹೊಸಂಗಡಿ, ಶ್ರೀಕಾಂತ.ಕೆ, ಭಾಗ್ಯಶ್ರೀ .ಸಿ ,ಎಂ .ನಾ ಚಂಬಲ್ತಿ ಮಾರ್, ಅಖಿಲೇಶ್ ನಗುಮುಗಂ, ಜಯ ಮಣಿಯಂ ಪಾರೆ ,ವಿರಾಜ್ ಅಡೂರು ಶ್ರೀಧರ .ಬಿ ,ವಸಂತ ಕೆರೆಮನೆ, ಅಬ್ದುಲ್ ರಹಿಮಾನ್ ಯು.ಎಂ, ಥೋಮಸ್ ಡಿ’ಸೋಜ, ಸತೀಶ್ ಅಡಪ ಸಂಕಬೈಲು, ಯೋಗೀಶ್ ರಾವ್ ಚಿಗುರುಪಾದೆ ,ತೆಕ್ಕೆಕೆರೆ ಶಂಕರನಾರಾಯಣ ಭಟ್, ಮುರಳೀಧರ ಬಳ್ಳಕ್ಕುರಾಯ,ಸುಕೇಶ.ಎ,ಕಾಸರಗೋಡು ಚಿನ್ನಾ, ವಾಮನ ರಾವ್ ಬೇಕಲ್, ಸಿರಿಬಾಗಿಲು ರಾಮಕೃಷ್ಣ ಮಯ್ಯ ,ಶಿವರಾಮ ಕಾಸರಗೋಡು ,ಗುರುಪ್ರಸಾದ್ ಕೋಟೆಕಣಿ, ಕೆ .ವಿ ರಮೇಶ್ ಕಾಸರಗೋಡು ,ಉಮೇಶ್ ಸಾಲಿಯಾನ್ ಮೊದಲಾದವರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

