ಬೀಗ ಹಾಕಿದ್ದ ಮನೆಯಿಂದ 2 ಲಕ್ಷ ರೂ. ಮೌಲ್ಯದ ಆಭರಣ ಕಳವು

​ ಕಾಸರಗೋಡು:ಪೆರಿಂಗೋಂನ ವಯಕ್ಕರೆಯಲ್ಲಿ ಬೀಗ ಹಾಕಿದ್ದ ಮನೆಯ ಬಾಗಿಲು ಮುರಿದು ಭಾರಿ ಕಳವು ನಡೆದಿದೆ.ಪಾರಯಿಲ್ ವಡಕ್ಕೆತಿಲ್ ಅಬ್ದುಲ್ ಕರೀಮ್ ಎಂಬುವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ.

​ಕಳೆದ ಮೂರು ದಿನಗಳಿಂದ ಕುಟುಂಬಸ್ಥರು ಮನೆಯಲ್ಲಿ ಇರಲಿಲ್ಲ. ಈ ಸಮಯದಲ್ಲಿ ಮನೆಯ ಹಿಂಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

​ಮನೆಯವರು ನೀಡಿದ ದೂರಿನ ಮೇರೆಗೆ ಪೆರಿಂಗೋಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಪಯ್ಯನ್ನೂರು ಡಿವೈಎಸ್ಪಿ ಪಿ.ಕೆ. ಮಣಿ ಅವರ ಮೇಲ್ವಿಚಾರಣೆಯಲ್ಲಿ ಸಿಐ ಶಾಜು, ಎಸ್‌ಐ ಕೆ. ಖದೀಜಾ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ತನಿಖೆ ತೀವ್ರಗೊಳಿಸಲಾಗಿದೆ.

SHARE
Loading spinner

2 thoughts on “ಬೀಗ ಹಾಕಿದ್ದ ಮನೆಯಿಂದ 2 ಲಕ್ಷ ರೂ. ಮೌಲ್ಯದ ಆಭರಣ ಕಳವು”

Leave a Reply

Your email address will not be published. Required fields are marked *

error: Content is protected !!