ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2026’ರ ಅಂಗವಾಗಿ ಶ್ರೀಮತಿ ವೀಣಾ ಪ್ರಸನ್ನ ಅವರಿಗೆ ‘ಕಾಸರಗೋಡು ದಸರಾ ಸಾಧಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಅಕ್ಟೋಬರ್ 11ರಿಂದ 20ರವರೆಗೆ ಕಾಸರಗೋಡು ಕನ್ನಡ ಭವನದ ಪ್ರಾಯೋಜಕತ್ವದಲ್ಲಿ ಹಾಗೂ ದೇವಸ್ಥಾನದ ಸಾಂಸ್ಕೃತಿಕ ಘಟಕದ ಸಹಯೋಗದಲ್ಲಿ ಈ ಸಾಂಸ್ಕೃತಿಕೋತ್ಸವ ನಡೆಯುತ್ತಿದೆ.

ದೇವಸ್ಥಾನದ ಸನ್ನಿಧಿಯಲ್ಲಿ ನಡೆದ ಸಮಾರಂಭದಲ್ಲಿ ಕ್ಷೇತ್ರದ ಪಾತ್ರಿ, ಸಾಂಸ್ಕೃತಿಕ ಘಟಕದ ಅಧ್ಯಕ್ಷರು, ಕನ್ನಡ ಭವನದ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್, ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷ ರಮೇಶ್ ಕುದ್ರೆಕೋಡ್, ಕುಂಬಳೆ ಹಾಗೂ ಸಂಧ್ಯಾ ರಾಣಿ ಟೀಚರ್ ಉಪಸ್ಥಿತರಿದ್ದು, ವೀಣಾ ಪ್ರಸನ್ನ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿಯೊಂದಿಗೆ ಫಲಪುಷ್ಪ, ಶಾಲು ಹಾಗೂ ಹಾರವನ್ನು ನೀಡಿ ಗೌರವಿಸಲಾಯಿತು.ಪ್ರದೀಪ್ ನಾಯ್ಕ್ ಸ್ವಾಗತಿಸಿದರು. ಗುರು ಚರಣ್ ಕೋಟೆಕಣಿ ವಂದಿಸಿದರು. ಡಾ. ಭುವನೇಶ್ವರಿ ಭವ್ಯ ಕುಂಬಳೆ ಕಾರ್ಯಕ್ರಮ ನಿರೂಪಿಸಿದರು.



Everything about this site screams quality. From the graphics to the overall flow, it is just a top notch experience. brricabet
Top notch gaming experience! The variety of slots is amazing and I love the daily bonuses they provide. Highly recommend checking out bdbt777.
I had some trouble logging in at first but their support team fixed it in minutes. The site is stable and the odds are very competitive. Try macan123login.