ಕಾಸರಗೋಡು: ಯುವತಿಯೊಬ್ಬರ ಜೊತೆಗಿನ ಫೋಟೋ ತೋರಿಸಿ ಬೆದರಿಸಿ, ಅವರ ತಾಯಿಯ 24 ಪವನ್ ಬಂಗಾರದ ಆಭರಣಗಳನ್ನು ಕಸಿದುಕೊಂಡ ಆರೋಪದ ಮೇಲೆ ಯೂಸುಫ್ ಇರ್ಷಾದ್ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪರಿಚಿತನಾಗಿದ್ದ ಇರ್ಷಾದ್, ಆಭರಣಗಳನ್ನು ಹಿಂತಿರುಗಿಸುವುದಾಗಿ ಬೆದರಿಸಿ ಪಡೆದುಕೊಂಡಿದ್ದರೂ ಬಳಿಕ ವಾಪಸ್ ನೀಡಲಿಲ್ಲ. ಶನಿವಾರ ಬಂದಿಯೋಡ್‌ನಲ್ಲಿ ಬಂಗಾರ ವಾಪಸ್ ಕೇಳಿದಾಗ, ಯುವತಿಯನ್ನು ಕಾರಿನಲ್ಲಿ ತಡೆದು ನಿಲ್ಲಿಸಿ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ.
ಘಟನೆಯಿಂದ ನೊಂದ 22 ವರ್ಷದ ಯುವತಿ ‘ಪ್ಯಾರಸಿಟಮೋಲ್ 650’ ಮಾತ್ರೆಗಳನ್ನು (20 ಮಾತ್ರೆಗಳು) ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಂಬಳೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

