ಭಾರೀ ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ನಾಳೆ ಬಬುಧವಾರ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯಲ್ಲಿ ಶಾಲಾ ಕಾಲೇಜು ಸಹಿತ ಶೈಕ್ಷಣಿಕ ಸಂಸ್ಥೆಗಳಿಗೂ ರಜೆ ಘೋಷಿಸಲಾಗಿದೆ.
ಕೇಂದ್ರ ಹವಾಮಾನ ಇಲಾಖೆ ಬಬುಧವಾರ ಕಾಸರಗೋಡು ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯಾಗಲೀ ರಜೆ ಪ್ರಕಟಿಸಿದರು. ಸಾರ್ವಜನಿಕ ಸುರಕ್ಷೆಯ ಮುನ್ನೆಚ್ಚರಿಕೆ ವಹಿಸಿ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಪ್ರಕಟಿಸಲಾಗಿದೆ. ಇದರಂತೆ ಕೇಂದ್ರೀಯ ವಿದ್ಯಾಲಯ, ಮದ್ರಸ, ಟ್ಯೂಷನ್ ಸೆಂಟರ್ ಸಹಿತ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಇದು ಅನ್ವಯವಾಗಿದೆ. ಈ ಹಿಂದೆ ಘೋಷಿಸಲ್ಪಟ್ಟ ವೃತ್ತಿಪರ ಪರೀಕ್ಷೆಗಳು ಬದಲಾವಣೆ ಇಲ್ಲದೇಯಥೋಚಿತ ನಡೆಯಲಿವೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ದುರಂತ ನಿವಾರಣಾ ಪ್ರಾಧಿಕಾರವನ್ನು -91 9446601700 ಸಂಪರ್ಕಿಸಬಹುದಾಗಿದೆ.