ಬದಿಯಡ್ಕ : ಲೈಂಗಿಕ ಸಂಬಂಧ ಬೆಳೆಸಿ ಅಪ್ರಾಪ್ತೆಗೆ ಹುಟ್ಟಿದ ಮಗುವನ್ನು ಅನಾಥ ಮಂದಿರಕ್ಕೆ ಹಸ್ತಾಂತರಿಸುವ ಯತ್ನದ ನಡುವೆ-ಆರೋಪಿಯ ಬಂಧನ

ಬದಿಯಡ್ಕ : ಲೈಂಗಿಕ ಸಂಬಂಧ ಬೆಳೆಸಿ 17ರ ಹರೆಯದ ಅಪ್ರಾಪ್ತೆಗೆ ಹುಟ್ಟಿದ ಮಗುವನ್ನು ಅನಾಥ ಮಂದಿರಕ್ಕೆ ಹಸ್ತಾಂಂತರಿಸುವ ಯತ್ನದ ನಡುವೆ ಆರೋಪಿಯನ್ನು ಬಂಧಿಸಲಾಗಿದೆ. ಯುವತಿ ಮತ್ತು ಯುವಕ ಇಬ್ಬರೂ ಬದಿಯಡ್ಕ ಠಾಣಾ ವ್ಯಾಪ್ತಿಗೆ ಸೇರಿದವರಾಗಿದ್ದಾರೆ.

ಪ್ಲಸ್ ಟು ಶಿಕ್ಷಣ ಪಡೆದ ಬಳಿಕ ಮನೆಯಲ್ಲೇ ಇದ್ದ ಯುವತಿಯನ್ನು ತಾಯಿಯ ಸಂಬಂಧಿಕನೇ ಆದ ಮೂರು ಮಕ್ಕಳ ತಂದೆಯಾದ 40ರ ವ್ಯಕ್ತಿ ನಿರಂತರ ದೌರ್ಜನ್ಯ ನಡೆಸಿ ಗರ್ಭಿಣಿಯನ್ನಾಗಿಸಿದನೆನ್ನಲಾಗಿದೆ.
ಯುವತಿ ಗರ್ಭಿಣಿ ಯಾದ ಬಳಿಕ ಶಂಕೆ ಬಾರದಿರಲು ಸುಳ್ಳು ಹೇಳಿ ಆಸ್ಪತ್ರೆ ಬದಲಾಯಿಸುತ್ತಾ ಚಿಕಿತ್ಸೆ ಪಡೆಯಲಾಗಿತ್ತು. ಹೆರಿಗೆಯಾದ ಬಳಿಕ ತಲಶ್ಶೇರಿಗೆ ತೆರಳಿ ಮಗುವನ್ನು ಅನಾಥ ಮಂದಿರಕ್ಕೆ ನೀಡಲು ಯುವತಿಯ ಮನೆಯವರು ಮುಂದಾದರು. ಈ ವೇಳೆ ಶಂಕೆ ಹೊಂದಿದ ಅನಾಥಾಲಯದವರು ಚೈಲ್ಡ್ ಲೈನ್ ಗೆ ನೀಡಿದ ಮಾಹಿತಿಯಂತೆ ಪೊಲೀಸರು ತಲುಪಿ ಯುವತಿಯನ್ನು ವಿಚಾರಣೆಗೊಳಪಡಿಸಿದಾಗ ಅನೈತಿಕ ಸಂಬಂಧ ಬೆಳಕಿಗೆ ಬಂತು. ಆನಂತರ ತಲಶ್ಶೇರಿ ಪೋಲೀಸರು ನೀಡಿದ ಮಾಹಿತಿಯಂತೆ ಬದಿಯಡ್ಕ ಪೋಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!