
ಕುಂಬಳೆ: ಪೂರ್ವ ದ್ವೇಷದ ಕಾರಣದಿಂದಾಗಿ ನಾಲ್ಕು ಮಂದಿ ಯುವಕರ ಮೇಲೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿದೆ.

ಇಚ್ಲಂಗೋಡು ಪಚ್ಚಂಬಳ ಸಫಾನಗರದ ಶರೀಫ್ ಎಸ್.ಎ. (36), ನವಾಜ್ (30), ಮಹಮ್ಮೂದ್ (30) ಹಾಗೂ ರಫೀಕ್ (30) ಎಂಬುವವರ ಮೇಲೆ ಈ ಹಲ್ಲೆ ನಡೆದಿದೆ.

ನವೆಂಬರ್ 2ರಂದು ರಾತ್ರಿ 11 ಗಂಟೆಯ ಸುಮಾರಿಗೆ ಇಚ್ಲಂಗೋಡು ಪಚ್ಚುಬಳ ಸಫಾನಗರದಲ್ಲಿ ಈ ಘಟನೆ ಸಂಭವಿಸಿದೆ.
ಯುವಕರು ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ದಾರಿಯಲ್ಲಿ ತಡೆದ ಸಹೋದರರಾದ ಇರ್ಷಾದ್ ಮತ್ತು ದಿಲ್ಶಾದ್ ಎಂಬುವವರು ಚಾಕುವಿನಿಂದ ಇರಿದು, ತಲ್ವಾರ್ ಬೀಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಗಾಯಗೊಂಡ ಶರೀಫ್ ಅವರು ಕುಂಬಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರು ಸಹೋದರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

