ಮಹಾವಿಷ್ಣು ಮೂರ್ತಿ ದೇವಸ್ಥಾನ ಸುಳ್ಯಮೆ ವರ್ಕಾಡಿ ದೇವಸ್ಥಾನದಲ್ಲಿ ದೇವರಿಗೆ ಪೂಜೆಯ ನಂತರ ದೇವಸ್ಥಾನದ ವಠಾರದಲ್ಲಿ ಆಟಿಡ್ ಒಂಜಿ ದಿನ ಕಾರ್ಯಕ್ರಮ ಮಹಾವಿಷ್ಣು ಮೂರ್ತಿ ಯುವಕ ಮಂಡಳಿ ಹಾಗೂ ಊರಿನ ಮಹಿಳಾ ಹಾಗೂ ಭಕ್ತರ ಸಹಕಾರದೊಂದಿಗೆ ನಡೆಯಿತು. ಊರಿನ ಮಹಿಳೆಯರು ಬಗೆ ಬಗೆಯ ತಿಂಡಿ ತಿನಿಸು ತಯಾರಿಸಿ ತಂದು ಭಕ್ತರಿಗೆ ಉಣಬಡಿಸಿದರು ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸಂತ ಸಾಮಾನಿ ಸುಳ್ಯಮೆ ಅವರು ವಹಿಸಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣೇಶ್ ಪಾವೂರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ದಿನಕರ ಕೋಟಿಯನ್ ಮಾಜಿ ಸೈನಿಕರು, ದೇವಪ್ಪ ಶೆಟ್ಟಿ ಕಂಪೆಮಾರು, ವಿಠ್ಠಲ್ ಶೆಟ್ಟಿ ತಾಮಾರು, ನಾರಾಯಣ ಶೆಟ್ಟಿ ಮುತ್ತುಂಜಾ,ಚೇತನ್ ಮುತ್ತುಂಜಾ,ಹರೀಶ್ ಗಟ್ಟಿ ಮುತ್ತುಂಜಾ, ವಿಶ್ವನಾಥ್ ಶೆಟ್ಟಿ ಮುತ್ತುಂಜಾ, ಅಶೋಕ ಕೊಡಿ ಹಿತ್ತಲು, ಚೆನ್ನಪ್ಪ ಶೆಟ್ಟಿ ಮುತ್ತುಂಜಾ, ನವೀನ್ ಸುಳ್ಯಮೆ ಹಾಗೂ ಭಕ್ತರು, ಊರಿನ ಜನರು ಬಗೆ ಬಗೆಯ ಖಾದ್ಯ ತಿಂಡಿ ಸವಿದು ಭಾಗವಹಿಸಿದರು