ಕುಂಬಳೆ: ಕುಂಬಳೆ ರೈಲು ನಿಲ್ದಾಣ ಸಮೀಪವಿದ್ದ ಕಾಡು, ಪೊದೆಗಳನ್ನು ಪುತ್ತಿಗೆ ಮೂಹಿಮತ್ ಹೈಯರ್ ಸೆಕೆಂಡರಿ ಶಾಲೆಯ ಲ್ಯಾಂಗ್ವೇಜ್ ಕ್ಲಬ್ ನ ವಿದ್ಯಾರ್ಥಿಗಳು ಸಂಪೂರ್ಣ ಸ್ವಚ್ಛಗೊಳಿಸಿದರು.
ನಿಲ್ದಾಣ ಪರಿಸರದಲ್ಲಿ ಸುತ್ತಲೂ ಕಾಡು ಪೊದೆ ಅವರಿಸಿದ ಕಾರಣ ಪ್ರಯಾಣಿಕರಿಗೆ ನಿಲ್ಲಲು ಕಷ್ಟವಾಗುತ್ತಿತ್ತು.
ಇದನ್ನು ಮನಗಂಡು ಈ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಸ್ವಚ್ಛಗೊಳಿಸಿದ್ದಾರೆ. ವಿದ್ಯಾರ್ಥಿಗಳ ಈ ಕಾರ್ಯವನ್ನು ರೈಲ್ವೆ ಅಧಿಕಾರಿಗಳು ಮತ್ತು ಪ್ರಯಾಣಿಕರು ಶ್ಲಾಗಿಸಿದರು.
ವಿದ್ಯಾರ್ಥಿಗಳ ಜೊತೆ ಶಿಕ್ಷಕರಾದ ದೇವರಾಜ್, ಆಶಾಲತಾ, ರಾಜೇಶ್ವರಿ ಜೊತೆಗಿದ್ದರು.