ಕಾಸರಗೋಡು : ಸ್ಥಳೀಯಾಡಳಿತ ಚುನಾವಣಾ ಪೂರ್ವಭಾವಿ ವಾರ್ಡು ವಿಭಜನೆ ಪ್ರಕ್ರಿಯೆ ಅಂತಿಮಗೊಂಡಿದೆ. ಇದರಂತೆ ಕಾಸರಗೋಡು ಜಿಲ್ಲೆಯಲ್ಲಿ ವಾರ್ಡುಗಳ ಸಂಖ್ಯೆ 725ಕ್ಕೇರಿದೆ. ಈ ಹಿಂದೆ ಜಿಲ್ಲೆಯಲ್ಲಿ 664 ವಾರ್ಡುಗಳಿದ್ದುವು. ವಾರ್ಡು ವಿಭಜನೆಯ ಬಳಿಕ ನೂತನವಾಗಿ 61ವಾರ್ಡುಗಳು ಹೆಚ್ಚಳಗೊಂಡಿವೆ. ನೂತನ ವಾರ್ಡುಗಳ ಡಿಜಿಟಲ್ ಭೂಪಟವನ್ನೂ ಪ್ರಕಟಿಸಲಾಗಿದೆ.
ಜಿಲ್ಲೆಯಲ್ಲಿದ್ದ 83 ಬ್ಲಾಕ್ ಪಂ. ವಾರ್ಡುಗಳ ಸಂಖ್ಯೆ 92ಕ್ಕೇರಿದೆ. 113ನಗರಸಭಾ ವಾರ್ಡುಗಳು 120ಕ್ಕೇರಿವೆ. 17ಜಿ.ಪಂ.ವಾರಡುಗಳು 18 ಆಗಿವೆ. ಒಟ್ಟು ಜಿಲ್ಲೆಯ ತ್ರಿಸ್ತರ ಪಂಚಾಯತಿನಲ್ಲಿ ಹಿಂದೆ 877ವಾರ್ಡುಗಳಿದ್ದುವು. ಈಗ ಇದು 955ಕ್ಕೇರಿದೆ.
ಒಟ್ಟು ಕೇರಳದಲ್ಲಿ 23,612ವಾರ್ಡುಗಳಿವೆ. ಈಹಿಂದೆ 21,900ವಾರ್ಡುಗಳಿದ್ದವು.
ರಾಜ್ಯದಲ್ಲಿ ತ್ರಿಸ್ತರ ಪಂಚಾಯತುಗಳನ್ನು ಮೂರು ಹಂತದಲ್ಲಿ ಪುನರ್ ವಿಭಜಿಸಿ ವಾರ್ಡು ನಿರ್ಣಯಿಸಲಾಗಿದೆ.
ನೂತನ ವಾರ್ಡು ನಿರ್ಣಯದ ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಇದರೊಂದಿಗೆ ಸ್ಥಳೀಯಾಡಳಿತ ಚುನಾವಣಾ ಸಿದ್ಧತೆ ಆರಂಭಗೊಂಡಿದೆ.
ಒಂದೆಡೆ ಮತದಾರರ ಯಾದಿಗೆ ಹೆಸರು ಸೇರ್ಪಡೆಗೆ ಸಕ್ರಿಯ ಕೆಲಸ ನಡೆದರೆ ತೆರೆಮರೆಯಲ್ಲಿ ಅಭ್ಯರ್ಥಿ ನಿರ್ಣಯದ ಸಭೆಗಳೂ ಆರಂಭಗೊಂಡಿದೆ.