ಕರ್ನಾಟಕದಿಂದ ಕೇರಳಕ್ಕೆ ಅನಧಿಕೃತವಾಗಿ ಸಾಗಾಟ ಮಾಡುತಿದ್ದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಸೆರೆ ಹಿಡಿದ ಅಬಕಾರಿ ಪೊಲೀಸರು.ಇಬ್ಬರ ಬಂಧನ .

ಮಂಜೇಶ್ವರ : ಮಂಜೇಶ್ವರ ಅಬಕಾರಿ ಇಲಾಖೆ ಕರ್ನಾಟಕದಿಂದ ಕೇರಳಕ್ಕೆ ಅನಧಿಕೃತವಾಗಿ ಸಾಗಾಟ ಮಾಡುತಿದ್ದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಆಫ್ಸಲ್ (32) ಹಾಗೂ ಅಶ್ರಫ್ (30) ಎಂಬ ಇಬ್ಬರನ್ನು ಬುಧವಾರ ಮುಂಜಾನೆ 5 ಗಂಟೆ ಸುಮಾರಿಗೆ ವಾಮಂಜೂರು ಚೆಕ್‌ಪೋಸ್ಟ್ ನಲ್ಲಿ ಕಾರು ತಪಾಸಣೆ ವೇಳೆ ಸೆರೆ ಹಿಡಿಯಲಾಗಿದೆ..

ಸಾಗಾಟ ಮಾಡುತ್ತಿದ್ದ ಕಾರಿನಿಂದ 214 ಕಿಲೋ ತೂಕದ ನಿಷಿದ್ಧ ತಂಬಾಕು ಉತ್ಪನ್ನಗಳು ಪತ್ತೆಯಾಗಿದ್ದು, ಇವುಗಳ ಮೌಲ್ಯ ಸುಮಾರು ರೂ. 2 ಲಕ್ಷ ಎಂದು ಅಂದಾಜಿಸಲಾಗಿದೆ.ಇದೇ ರೀತಿ ವಾರದ ಹಿಂದೆ, ಕುಂಬಳೆ ಪೊಲೀಸರು 12 ಲಕ್ಷ ರೂಪಾಯಿ ಮೌಲ್ಯದ ತಂಬಾಕು ಉತ್ಪನ್ನಗಳೊಂದಿಗೆ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದರು. ಈ ಮಾಫಿಯಾ ಗ್ಯಾಂಗ್‌ಗಳು ಕಾರ್ನಾಟಕದಿಂದ ಕಡಿಮೆ ದರದಲ್ಲಿ ಖರೀದಿಸಿದ ತಂಬಾಕು ಉತ್ಪನ್ನಗಳನ್ನು ಕೇರಳಕ್ಕೆ ತಂದು ಇಮ್ಮಡಿ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಇವುಗಳನ್ನು ಮುಖ್ಯವಾಗಿ ಇತರ ರಾಜ್ಯಗಳಿಂದ ಬಂದ ಹೆಣ್ಣುಮಕ್ಕಳು ಸೇರಿದಂತೆ ಇತರ ಕಾರ್ಮಿಕರು ಬಳಸುತ್ತಿದ್ದಾರೆ. ಪ್ರತಿ ಕಾರ್ಮಿಕರು ದಿನಕ್ಕೆ ಸುಮಾರು 100 ರೂಪಾಯಿ ತನಕ ತಂಬಾಕು ಉತ್ಪನ್ನಗಳನ್ನು ಖರೀದಿ ಮಾಡುತ್ತಿದ್ದಾರೆಂಬುದು ಅಂಕಿಅಂಶಗಳಿಂದ ತಿಳಿದು ಬಂದಿದೆ. ಇದರ ಏಜೆಂಟ್‌ಗಳು ಕಾರ್ಮಿಕರ ವಾಸಸ್ಥಳಗಳಿಗೆ ನೇರವಾಗಿ ತಂಬಾಕು ಸರಬರಾಜು ಮಾಡುತ್ತಾರೆಂಬ ಮಾಹಿತಿ ಕೂಡಾ ಇದೆ.

50 ಅಥವಾ 100 ಪ್ಯಾಕೆಟ್‌ಗಳನ್ನು ಪತ್ತೆಹಚ್ಚಿದರೂ, ಅಧಿಕಾರಿಗಳು ಬಹುತೇಕ ಸಂದರ್ಭದಲ್ಲಿ ವಸ್ತುಗಳನ್ನು ನಾಶಮಾಡುವುದರೊಂದಿಗೆ ಪಡಕೊಂಡವರ ವಿರುದ್ಧ ಯಾವುದೇ ಕೇಸು ದಾಖಲಿಸಿದೆ ಬಿಡುತಿದ್ದಾರೆ. ಅದೇ ರೀತಿ ಲಕ್ಷಾಂತರ ರೂಪಾಯಿಗಳ ಮೌಲ್ಯದ ತಂಬಾಕು ಉತ್ಪನ್ನಗಳನ್ನು ತಗೆದುಕೊಂಡು ಬಂದವರ ವಿರುದ್ಧ ಕೇವಲ ಸಣ್ಣ ಪ್ರಕರಣ ದಾಖಲಿಸಿ, ಕೆಲವೇ ಗಂಟೆಗಳಲ್ಲಿ ಸ್ಟೇಶನ್ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!