ಪೈವಳಿಕೆ: ಭಾರತ ಜಗತ್ತಿನಲ್ಲಿ ವಿಶ್ವ ಗುರು ಆಗುತ್ತಿದೆ, ದೇಶದ ಸೈನಿಕ ಶಕ್ತಿ ಓಪರೇಶನ್ ಸಿಂಧೂರ ಮೂಲಕ ಜಗತ್ತು ಕಂಡಿದೆ. ಉತ್ತರ ನೀಡಲು ಹೊರಟರೆ ಭಾರತದ ಶಕ್ತಿಯನ್ನು ಮನಿಸಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ನಿವೃತ್ತ ಸೇನಾನಿ ಕಯ್ಯರ್ ನಾರಾಯಣ ಶೆಟ್ಟಿ ಹೇಳಿದರು.
ಬಾಯಿಕಟ್ಟೆ ಯಿಂದ ಪೈವಳಿಕೆ ಪೇಟೆ ತನಕ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವ ದಲ್ಲಿ ನಡೆದ ತಿರಂಗ ಯಾತ್ರೆ ಯನ್ನು ನಿವೃತ್ತ ಸೈನಿಕ ರಾದ ವಸಂತ್ ಕೃಷ್ಣ ಶರ್ಮ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷರಾದ ಆದರ್ಶ ಬಿ ಎಂ ರಿಗೆ ದೇಶ ಧ್ವಜ ಹಸ್ತಾಂತರ ಮಾಡಿ ಉದ್ಘಾಟಿಸಿ ಯಾತ್ರೆಗೆ ಚಾಲನೆ ನೀಡಿದರು.
ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಕ್ರಾಂತಿಯ ರೂಪ, ಸಂವಿಧಾನ ದೇಶದ ಆತ್ಮ, ದೇಶದ ಅಸ್ಮಿತೆಯನ್ನು ಪ್ರಶ್ನೆಸುವ ದೇಶದ್ರೋಹಿ ಗಳನ್ನು ದೇಶ ಪ್ರೇಮಿಗಳು ಹಿಮ್ಮೆಟಿಸ ಬೇಕೆಂದು ಕರೆ ನೀಡಿದರು.ನಿವೃತ್ತ ಸೇನಾನಿ ಐತಪ್ಪ ಅಡ್ಯoತ್ತಯ ಉಪಸ್ಥಿತರಿದ್ದರು.
ಬsc ಮೋರ್ಚಾ ರಾಜ್ಯ ಉಪಾಧ್ಯಕ್ಷ Ak ಕಯ್ಯರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೊಂಡ, ಸದಾಶಿವ ಚೇರಲ್, ಮಂಜುನಾಥ್ ಶೆಟ್ಟಿ, ಸಂದೀಪ್ ಬಾಯರ್, ಪ್ರವೀಣ್ ಪಟ್ಲಾ, ಸತ್ಯಶಂಕರ್ ಉಪಸ್ಥಿತರಿದ್ದರು.
ಕೆ ವಿ ಭಟ್,ಸನತ್ ರೈ, ಬಾಲಕೃಷ್ಣ, ಪುಷ್ಪ ಲಕ್ಷ್ಮಿ, ಜಯಲಕ್ಷ್ಮಿ ಭಟ್, ಮಮತಾ, ರಾಜೀವಿ, ತುಳಸಿ ಕುಮಾರಿ, ಗಣೇಶ ಪ್ರಸಾದ್, ನಾಗೇಶ್ ಬಳ್ಳೂರು, ಪೊಯ್ಯೇ ಭಾಸ್ಕರ್ ನೇತೃತ್ವ ನೀಡಿದರು.ಸುಬ್ರಮಣ್ಯ ಭಟ್ ಸ್ವಾಗತಿಸಿ, ಯತೀರಾಜ್ ಶೆಟ್ಟಿ ಧನ್ಯವಾದ ನೀಡಿದರು.