ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಐಸಿರಿ ತಂಡದ ಈ ವರ್ಷದ ಹೊಚ್ಚ ಹೊಸ ನಾಟಕ ಜೈ ಭಜರಂಗ ಬಲಿ ಆಗಸ್ಟ್ 16 ರ ಶನಿವಾರದಂದು ರಾತ್ರಿ 8 ಗಂಟೆಗೆ ಶ್ರೀ ಪಾಂಡುರಂಗ ಭಜನಾ ಮಂದಿರ ಮುದಂಗಾರು ಕಟ್ಟೆಯಲ್ಲಿ ಪ್ರಥಮ ಪ್ರದರ್ಶನ ಕಾಣಲಿದೆ.
‘ಸು ಫ್ರಮ್ ಸೊ’ ಚಿತ್ರದ ಭಾವ ಬಂದರು ಖ್ಯಾತಿಯ ಪ್ರಬುದ್ಧ ಕಲಾವಿದ ಪುಷ್ಪರಾಜ್ ಬೊಳ್ಳಾರ್ ,’ತುಳುನಾಡ ರಂಗ ಬೊಳ್ಳಿ’ ರವಿ ರಾಮ ಕುಂಜ ,’ಗಡಿನಾಡ ಅಭಿನಯ ರತ್ನ’ ಅನಿಲ್ ರಾಜ್ ಉಪ್ಪಳ ,’ರಂಗ ಚತುರ’ ಅಶೋಕ್ ಬೇಕೂರು ಅಭಿನಯಿಸುವ ಈ ನಾಟಕಕ್ಕೆ ವಿಕ್ರಾಂತ್ ಚಿತ್ರಾಪುರ ನಿರ್ದೇಶನ ಮಾಡಿದ್ದಾರೆ.ಸಾಹಿತ್ಯ ರಾಜೇಶ್ ಮುಗುಳಿ ,ಹಿನ್ನಲೆ ಸಂಗೀತ ಪ್ರವೀಣ್ ಕಣಿಯೂರು,ಧ್ವನಿ ಮತ್ತು ಬೆಳಕಿನ ಸಂಯ್ಯೋಜನೆ ಅಕ್ಷತ್ ಕೊಂಡಾಣ ಮಾಡಿದ್ದಾರೆ.ಸಂಪತ್ ಸುವರ್ಣ ಬೆಳ್ತಂಗಡಿ ಸಹಕಾರ ನೀಡಿದ್ದಾರೆ.