ರಿಧಂ ಕಲ್ಚರಲ್ ವಿಂಗ್ ಮಂಜೇಶ್ವರದ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ವಿಡಿಯೋ ಆಲ್ಬಮ್ ‘ಮಾ ತುಜೆ ಸಲಾಂ’ ಬಿಡುಗಡೆ ನಮ್ಮ ಮೀಡಿಯಾ ಕಚೇರಿಯಲ್ಲಿ ಖ್ಯಾತ ಚಲನಚಿತ್ರ ,ನಾಟಕ ಹಾಸ್ಯ ನಟ ಸು ಫ್ರಮ್ ಸೋ ಚಿತ್ರದ ಬಾವ ಬಂದರು ಖ್ಯಾತಿಯ ಪುಷ್ಪರಾಜ್ ಬೊಳ್ಳಾರ್ ಬಿಡುಗಡೆಗೊಳಿಸಿದರು
ಈ ಹಾಡಿಗೆ ಸಬಿ ತೆಕ್ಕೆಪುರಂ ,ಅಬ್ದುಲ್ ರಾಫಿ ,ಸತೀಶ್ ಕಯ್ಯಾರ್ ,ನಜೀರ ಎಂ.ಪಿ ಸಾಹಿತ್ಯವನ್ನು ನೀಡಿದ್ದು , ಧ್ವನಿ ಮುದ್ರಣವನ್ನು ರಾಜು ಉಪ್ಪಳ , ದಸ್ತಕೀರ್ ನಿರ್ವಾಹಿದ್ದಾರೆ , ಗಫೂರ್ ಪೆರ್ವಾಡ್ ಛಾಯಾಗ್ರಹಣದಲ್ಲಿ ಮೂಡಿದ ಈ ಆಲ್ಬಮ್ ಗೀತೆಯು ಸಿದ್ದಿಕ್ ಮಂಜೇಶ್ವರ ಅವರ ನಿರ್ದೇಶನ ಮಾಡಿದ್ದಾರೆ .
ಈ ಆಲ್ಬಂನಲ್ಲಿ ಕರಾವಳಿಯ ಅನೇಕ ಗಾಯಕ ಗಾಯಕಿಯರು ಧ್ವನಿಯಾಗಿ ಕಾಣಿಸಿಕೊಂಡಿದ್ದಾರೆ .ಕನ್ನಡ ,ಮಲಯಾಳಂ,ಹಿಂದಿ ಅರೇಬಿ ಭಾಷೆಗಳ ಮಿಶ್ರಿತದಲ್ಲಿರುವ ಈ ಹಾಡು ನಮ್ಮ ಮೀಡಿಯಾ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.
ಬಿಡುಗಡೆ ಸಮಾರಂಭದಲ್ಲಿ ನಮ್ಮ ಮೀಡಿಯಾ ದ ಆಡಳಿತ ನಿರ್ದೇಶಕ ಜಗದೀಶ್ ಮಡಿವಾಳ್ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು . ಸುರೇಶ್ ಮಂಗಲ್ಪಾಡಿ ಸ್ವಾಗತಿಸಿ ಸಿದ್ದಿಕ್ ಮಂಜೇಶ್ವರ ಧನ್ಯವಾದವಿತ್ತರು