ಯುವ ಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿ (ರಿ)ಯುವ ಶಕ್ತಿ ಫ್ರೆಂಡ್ಷ್ ಸರ್ಕಲ್ ಲೈಬ್ರೆರಿ (ರಿ)K .G .D 6412 ಸುಭಾಷ್ ನಗರ ಬೇಕೂರು ಇದರವತಿಂದ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮನೋಜ್ ಕುಮಾರ್ ವಹಿಸಿದರು. ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಸುಜಾತ.ಯು.ಶೆಟ್ಟಿ ಧ್ವಜಾರೋಹಣ ಮಾಡಿ ಉದ್ಘಾಟಿಸಿ ಮಾತಾಡಿದರು.
ಈ ಸಂದರ್ಭದಲ್ಲಿ ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯೆ ವನಿತಾ ಆರ್ ಶೆಟ್ಟಿ ಶುಭಹಾರೈಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಲೈಬ್ರೆರಿ ಅಧ್ಯಕ್ಷರಾದ ಲಕ್ಷ್ಮಣ ಪೂಜಾರಿ, ಲೈಬ್ರೆರಿ ಕಾರ್ಯದರ್ಶಿ ರವಿಂದ್ರ ಶೆಟ್ಟಿ ಬೊಳ್ಳಾರು ಸಾಮಾಜಿಕ ಕಾರ್ಯಕರ್ತರಾದ ಉಮೇಶ್ ಶೆಟ್ಟಿ ಬೊಳ್ಳಾರು ಹಾಗೂ ಹಿರಿಯ ಕಾರ್ಯಕರ್ತರಾದ ಜನಾರ್ಧನ ಪೂಜಾರಿ, ವಾಸು ಕುಲಾಲ್, ವಸಂತ ಶೆಟ್ಟಿ ರವಿ ಕುಲಾಲ್, ಶ್ರೀಧರ್ ಕುಲಾಲ್ ಮತ್ತು ಅಂಗನವಾಡಿ ಕಾರ್ಯಕರ್ತೆ ರತ್ನ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಜನಾರ್ದನ ಕುಲಾಲ್ ಸ್ವಾಗತಿಸಿ ದೇವದಾಸ್ ಸಾಲಿಯಾನ್ ವಂದಿಸಿದರು.