ಹಬ್ಬ ಹರಿದಿನಗಳ ಆಚರಣೆ ಮುಂದಿನ ಪೀಳಿಗೆಗೆ ಆದರ್ಶ – ಹರಿನಾಥ ಭಂಡಾರಿ.

ಉಪ್ಪಳ : ಇಲ್ಲಿಗೆ ಸಮೀಪದ ಮುಳಿಂಜ ಮದ್ದಪವಳ್ಳಚ್ಚಲ್ ಮಹಾನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರುಕುಡಿಕೆ ಉತ್ಸವವು ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ಸಡಗರ ಸಂಭ್ರಮದಿಂದ ನಡೆಯಿತು.ಮುಳಿಂಜ ಗುತ್ತು ಶ್ರೀ ನಂದರಾಜ ಭಂಡಾರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಶ್ರೀ ಹರಿನಾಥ ಭಂಡಾರಿ ತೆಂಗಿನಕಾಯಿ ಒಡೆಯುವ ಮೂಲಕ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು.


ಬಳಿಕ ಮಕ್ಕಳಿಗೆ, ಯುವಕ-ಯುವತಿಯರಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಯನ್ನು ನಡೆಸಲಾಯಿತು. ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಯುವಶಕ್ತಿ ಫ್ರೆಂಡ್ಸ್ ಮುಳಿಂಜ ಸತತ ಮೂರನೇ ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆಗೈದರು. ವೀರ ಕೇಸರಿ ಐಲ ದ್ವಿತೀಯ, ಇಂಡಿಯನ್ ಆರ್ಮಿ ಪಚ್ಚಿಲಂಪಾರೆ ತೃತೀಯ ಹಾಗೂ ವೀರಾಂಜನೇಯ ಕನ್ವತೀರ್ಥ ಚತುರ್ಥ ಸ್ಥಾನವನ್ನು ಪಡೆದರು.
ಮಹಿಳೆಯರ ಹಗ್ಗ ಜಗ್ಗಾಟ ದಲ್ಲಿ ಗರ್ಲ್ಸ್ ಫ್ರೆಂಡ್ಸ್ ಮುಳಿಂಜ ಪ್ರಥಮ ಸ್ಥಾನ ಪಡೆದರೆ ಟೀಮ್ ವಿಧ್ಯಾ ದ್ವಿತೀಯ ಸ್ಥಾನ ಪಡೆದರು.ಮಕ್ಕಳ ಹಗ್ಗ ಜಗ್ಗಾಟ ದಲ್ಲಿ ಡ್ರಾಗನ್ ಉಪ್ಪಳ ಪ್ರಥಮ ,ಲಿಯೋ ಉಪ್ಪಳ ದ್ವಿತೀಯ ಸ್ಥಾನ ಪಡೆದಿದ್ದಾರೆ.


ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಕಿಶೋರ್ ಕುಮಾರ್ ಸ್ವಾಗತಿಸಿದರು. ಸಮಿತಿಯ ಅಧ್ಯಕ್ಷ ಶ್ರೀ ವಾಮನ ಸಾಗ್ ಅಧ್ಯಕ್ಷತೆ ವಹಿಸಿದ್ದರು. ಮುಳಿಂಜ ಮಹಾಲಿಂಗೇಶ್ವರ ದೇವಾಲಯದ ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ನ ನಿರ್ದೇಶಕ,ಧಾರ್ಮಿಕ-ಸಾಮಾಜಿಕ ಮುಂದಾಳು ಶ್ರೀ ಹರಿನಾಥ ಭಂಡಾರಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಬಳಿಕ ಮಾತನಾಡಿದ ಅವರು ಹಬ್ಬ ಹರಿದಿನಗಳನ್ನು ಆಚರಿಸುವುದರಿಂದ ಮುಂದಿನ ಪೀಳಿಗೆಗೆ ಆದರ್ಶಗಳಾಗುತ್ತದೆ ಎಂದರು.ಶ್ರೀ ಪದ್ಮನಾಭ ಕರ್ಪು ಮತ್ತು ಸಂಜೀವ ಮುಳಿಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ಸುಶ್ಮೀತಾ ವಂದಿಸಿದರು. ಸುರೇಶ್ ಕುಮಾರ್ ಮಂಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಸುಧಾಕರ್, ಶ್ರೀ ರಮೇಶ ಪತ್ವಾಡಿ, ಶ್ರೀ ಸುರಾಜ್, ಶ್ರೀ ಸುನಿಲ್, ಶ್ರೀ ರಾಮಕೃಷ್ಣ, ಕು.ಪ್ರಜ್ಞಿತ,ಕು.ಪ್ರತೀಕ್ಷಾ,ಕು.ಕೀರ್ತಿ,ಕು.ರೇಣುಕಾ ಆಟೋಟ ಸ್ಪರ್ಧೆಗಳನ್ನು ನಿಯಂತ್ರಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!