ಕೃಷ್ಣ ಜನ್ಮಾಷ್ಟಮಿ ಸಮಿತಿ ಇಡಿಯ ಕಡಂಬಾರಿನಲ್ಲಿ 22ನೇ ವರ್ಷದ ಮೊಸರುಕುಡಿಕೆ ಉತ್ಸವ ಆಚರಣೆ

ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಇಡಿಯ ಕಡಂಬಾರು ಇಲ್ಲಿ 22ನೇ ವರ್ಷದ ಮೊಸರುಕುಡಿಕೆ ಉತ್ಸವನ್ನು ಅದ್ದೂರಿಯಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ದೂಮ ಪೂಜಾರಿ ಅವರು ಉದ್ಘಾಟಿಸಿದರು.ಕಾರ್ಯಕ್ರಮದ ಅಂಗವಾಗಿ ಮಕ್ಕಳು,ಮಹಿಳೆಯರು ಹಾಗು ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು .

ಸಾಯಂಕಾಲ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷ ಸ್ಥಾನವನ್ನು ಜನ ಜಾಗೃತಿ ವೇದಿಕೆ ಮಂಜೇಶ್ವರ ಇದರ ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ ಮಾಡ ವಹಿಸಿದರು .ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಂಬಾರು ಮಂಗಲ್ಪಾಡಿ ಇದರ ಮುಖ್ಯಸ್ಥರು ಹಾಗು ಧಾರ್ಮಿಕ ಮುಂದಾಳು ಡಾ ವಿಜಯ ಪಂಡಿತ್ ಮಂಗಲ್ಪಾಡಿ ಧಾರ್ಮಿಕ ಭಾಷಣ ಮಾಡಿ ಆಚರಣೆಯ ಬಗ್ಗೆ ಸನಾತನ ಧರ್ಮದ ಬಗ್ಗೆ ಸುಧೀರ್ಘವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಿಂಜ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಆಶಾಲತಾ , ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ವರ್ಕಾಡಿ ಗ್ರಾಮ ಇದರ ಸೇವಾಧ್ಯಕ್ಷೆಯಾದ ಶ್ರೀಮತಿ ಆಶಾಲತಾ ಬಿ.ಎಂ, ಮಂಜೇಶ್ವರ ಗ್ರಾಮ ಪಂಚಾಯತ್ ಸದ್ಯಸರಾದ ಶೀಮತಿ ಜಯಂತಿ ಕಾಜೂರು ಉಪಸ್ಥಿತರಿದ್ದರು.

ಬಳಿಕ ವಿವಿಧ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!