ಕುಂಬಳೆ: ಕಾರ್ಯನಿರ್ವಹಣಾ ಶ್ರೇಷ್ಠತೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆಯ ಕುಂಬಳೆ ಶಾಖೆ ಪೌರ ಸ್ವಾಗತ ಕಾರ್ಯಕ್ರಮ ನಡೆಯಿತು .
ರಾಜ್ಯ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗ ,ಹಿಂದುಳಿದ ವರ್ಗ ಖಾತೆ ಸಚಿವ ಓ .ಆರ್. ಕೇಳು ಉಧ್ಘಾಟಿಸಿದರು.ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ತಾಯಿರ ಯೂಸುಫ್ , ಸಂಸದ ರಾಜಮೋಹನ್ ಉಣ್ಣಿತಾನ್ ,ತ್ರಿಕರಿಪುರ ಶಾಸಕ ಎಂ ರಾಜಗೋಪಾಲನ್ , ಶಾಸಕ ಇ .ಚಂದ್ರಶೇಖರನ್ ,ಸಿ ಎಚ್ ಕುಂಜಂಬು , ಏನ್ ಎ ನೆಲ್ಲಿಕುನ್ನು ,ಜಿಲ್ಲಾ ಪಂಚಾಯತ್ ಅಧ್ಯಕ್ಷ ಬೇಬಿ ಬಾಲಕೃಷ್ಣನ್ , ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಡಿ ಸುಬ್ಬಣ್ಣ ಆಳ್ವ , ಜಿಲ್ಲಾ ಪಂಚಾಯತ್ ಸದಸ್ಯರಾದ ಜಮೀಲಾ ಸಿದ್ದಿಕ್, ರಘುರಾಮ ಛತ್ರಂಪಲ್ಲ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ನಾಯಕರು ,ಜನ ಪ್ರತಿನಿಧಿಗಳು ಮುಂತಾದವರು ಭಾಗವಹಿಸಿದ್ದರು .ಸಿ ಎ ಝುಬೈರ್ ಸ್ವಾಗತಿಸಿದರು. ಕೆ ಎ ಸಂತೋಷ್ ಕುಮಾರ್ ವಂದಿಸಿದರು