ಉಪ್ಪಳ :ಪ್ರತಾಪನಗರ ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಮಂದಿರದಲ್ಲಿ 42 ನೇ ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಹಾಗೂ ಸಾಮೂಹಿಕ ಶ್ರೀ ಶನೈಶ್ಚರ ಕಲ್ಪೋಕ್ತ ಪೂಜೆ ಮತ್ತು 8 ನೇ ವರ್ಷದ ಭಜನೋತ್ಸವ ಆಗಸ್ಟ್ 24 ರಿಂದ 28 ರ ವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ದಿನಾಂಕ 24 ರಂದು ಬೆಳಿಗ್ಗೆ 7 ರಿಂದ ಸಾಮೂಹಿಕ ಪ್ರಾರ್ಥನೆ ,ಗಣಹೋಮ .ಸಾಯಂಕಾಲ 3 30 ರಿಂದ ಬಜೆ ಹರಿನಾರಾಯಣ ಮಯ್ಯ ಇವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಕಲ್ಪೋಕ್ತ ಪೂಜೆ ಹಾಗೂ ಸಂಜೆ 7 30 ರಿಂದ ಮಕ್ಕಳಿಂದ ಯಕ್ಷಗಾನ ನಡೆಯಲಿದೆ.
25 ರಂದು ವಿವಿಧ ಭಜನಾ ತಂಡಗಳಿಂದ ಭಜನೆ , ರಾತ್ರಿ 8 30 ಕ್ಕೆ ದುರ್ಗಾ ನಮಸ್ಕಾರ ಪೂಜೆ , ಭರತನಾಟ್ಯ ಹಾಗೂ ಸಮೂಹ ನೃತ್ಯ ಸ್ಪರ್ಧೆ ನಡೆಯಲಿದೆ. 26 ರಂದು ಬೆಳಗ್ಗೆ 7 30 ಗಣಪತಿ ಪ್ರತಿಷ್ಠೆ ,ಪ್ರತಿಷ್ಠಾ ಪೂಜೆ ,ಗೌರಿ ಪೂಜೆ ,ಭಕ್ತಿ ಗಾನಾಮೃತ ,ಮಹಾಪೂಜೆ ,ಅನ್ನಸಂತರ್ಪಣೆ ನಡೆಯಲಿದೆ.ಮಧ್ಯಾಹ್ನ ಯಕ್ಷಗಾನ ತಾಳಮದ್ದಳೆ ,ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ,ವಿಶೇಷ ಹೂವಿನ ಪೂಜೆ ನಡೆಯಲಿದೆ.
27 ರಂದು ಬೆಳಗ್ಗೆ ಭಜನೆ ,ಕುಣಿತ ಭಜನೆ ,ತಿರುವಾದಿರ ,ತಾಳಮದ್ದಳೆ ನಡೆಯಲಿದೆ.28 ರಂದು ಬೆಳಗ್ಗೆ 7 30 ಕ್ಕೆ ಭುವನೇಶ್ವರಿ ಪೂಜೆ ಮತ್ತು ಅಗ್ನಿ ಜನನ ಸಹಿತ 108 ಕಾಯಿಗಳ ಗಣಯಾಗ , ಭಜನೆ ,ಮಧ್ಯಾಹ್ನ 1 30 ಕ್ಕೆ ಮಹಾಪೂಜೆ , ಅನ್ನಸಂತರ್ಪಣೆ ಹಾಗೂ 2 30 ಕ್ಕೆ ಉತ್ತರ ಪೂಜೆ ,ವಿಸರ್ಜನಾ ಮೆರವಣಿಗೆ ನಡೆಯಲಿದೆ.