ಕಾಸರಗೋಡು : ನರೇಂದ್ರ ಮೋದಿ ಸರ್ಕಾರದ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ 60 ವರ್ಷ ಮೇಲ್ಪಟ್ಟವರಿಗೆ ಸಹಾಯಕ ಉಪಕರಣಗಳನ್ನು ವಿತರಿಸಲಾಯಿತು. ವಿಕಸಿತ ಕೇರಳ ಕಾಸರಗೋಡು ಜಿಲ್ಲಾ ಹೆಲ್ಸ್ ಡೆಸ್ಕ್ ಮೂಲಕ ನೋಂದಾಯಿಸಿದವರಿಗೆ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷರಾದ ಅಶ್ವಿನಿ ಎಂ.ಎಲ್. ಅವರು ಸಹಾಯಕ ಉಪಕರಣಗಳನ್ನು ಹಸ್ತಾಂತರಿಸಿದರು.
ಬಿಜೆಪಿ ಜಿಲ್ಲಾ ಕಚೇರಿ ಡಾ. ಶ್ಯಾಮ್ ಪ್ರಕಾಶ್ ಮುಖರ್ಜಿ ಮಂದಿರದಲ್ಲಿ ವಿತರಣಾ ಕಾರ್ಯಕ್ರಮ ನಡೆಯಿತು. 60 ವರ್ಷ ಮೇಲ್ಪಟ್ಟ ಹೆಸರು ನೋಂದಾಯಿಸಿದ ಹಿರಿಯ ಕಾರ್ಯಕರ್ತರಿಗೆ ಸಹಾಯಕ ಉಪಕರಣಗಳನ್ನು ವಿತರಿಸಲಾಯಿತು.