ಕುಂಬಳೆ ರಾ.ಹೆದ್ದಾರಿಯಲ್ಲಿ ಕಾರೊಂದು ಸ್ಕೂಟರಿಗೆ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಸ್ಕೂಟರ್ ಸವಾರ ದಾರುಣವಾಗಿ ಸಾವು.

ಮಂಜೇಶ್ವರ : ಕುಂಬಳೆ ರಾ.ಹೆದ್ದಾರಿಯಲ್ಲಿ ಕಾರೊಂದು ಸ್ಕೂಟರಿಗೆ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಸ್ಕೂಟರ್ ಸವಾರ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಉಪ್ಪಳ ಸೋಂಕಾಲು ಪ್ರತಾಪ ನಗರ ನಿವಾಸಿ ನವೀನ (53) ಸಾವನ್ನಪ್ಪಿದ ದುರ್ದೈವಿ. ಶನಿವಾರ ರಾತ್ರಿ ಕುಂಬಳೆಯಲ್ಲಿ ಕೆಲಸ ಮುಗಿಸಿ ಮನೆಯ ಕಡೆ ಹಿಂತಿರುಗುತ್ತಿರುವ ಮಧ್ಯೆ ಕುಂಬಳೆ ಗೋಪಾಲಕೃಷ್ಣ ಕ್ಷೇತ್ರ ಸಮೀಪದ ಷಟ್ಪದ ರಸ್ತೆಯಲ್ಲಿ ಎದುರು ಭಾಗದಿಂದ ಅಮಿತ ವೇಗದಲ್ಲಿ ಆಗಮಿಸಿದ ಕಾರೊಂದು ಸ್ಕೂಟರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಹೊಡೆತದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡ ನವೀನ ರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವವನ್ನು ರಕ್ಷಿಸಲು ಸಾಧ್ಯವಾಗಿಲ್ಲ.

SHARE
Loading spinner

Leave a Reply

Your email address will not be published. Required fields are marked *

error: Content is protected !!