ಶಾಲಾ ಮಿತ್ರ ಮಂಡಳಿ ಗ್ರಂಥಾಲಯ ಮತ್ತು ವಾಚನಾಲಯ ಹಾಗೂ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಸಂಯುಕ್ತ ಆಶ್ರಯದಲ್ಲಿ ಸಂಸ್ಮರಣಾ ಕಾರ್ಯಕ್ರಮ.

ಮಂಜೇಶ್ವರ: ಶಾಲಾ ಮಿತ್ರ ಮಂಡಳಿ ಗ್ರಂಥಾಲಯ ಮತ್ತು ವಾಚನಾಲಯ ಹಾಗೂ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಸಂಯುಕ್ತ ಆಶ್ರಯದಲ್ಲಿ ಆದಿತ್ಯವಾರದಂದು ಎಸ್ ನಾರಾಯಣ ಭಟ್ ಅವರ ಸಂಸ್ಮರಣಾ ಕಾರ್ಯಕ್ರಮವು ಬಾಯಾರು ಹೆದ್ದಾರಿ ಶಾಲಾ ಸಭಾಂಗಣದಲ್ಲಿ ಜರುಗಿತು.

ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಅಧ್ಯಕ್ಷರಾದ ಶ್ರೀಮತಿ ಶ್ರೀ ಕುಮಾರಿ ಟೀಚರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾಹಿತಿಗಳಾದ ಶ್ರೀ ಶ್ರೀರಾಮ ಪದಕಣ್ಣಾಯ ಅವರು ಸಂಸ್ಮರಣಾ ಭಾಷಣವನ್ನು ನೆರವೇರಿಸಿದರು.

ಶ್ರೀ ರಾಮಕೃಷ್ಣ ಭಟ್ ಪೆಲತ್ತಡ್ಕ, ಗ್ರಂಥಾಲಯದ ಉಪಾಧ್ಯಕ್ಷರಾದ ಶ್ರೀ ಮೋನಪ್ಪ ಶೆಟ್ಟಿ ಕಟ್ನಬೆಟ್ಟು, ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ನ ಸದಸ್ಯರಾದ ಶ್ರೀ ದಾಸಪ್ಪ ಶೆಟ್ಟಿ, ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಕಾರ್ಯದರ್ಶಿಗಳಾದ ಶ್ರೀ ಕಮಲಾಕ್ಷ ಅವರು,ಹಾಗೂ ಹೆದ್ದಾರಿ ಶಾಲಾ ಪ್ರಬಂಧಕರಾದ ಶ್ರೀ ರಾಜೇಶ್ ಏನ್ ಅವರು ಎಸ್ ನಾರಾಯಣ ಭಟ್ ಅವರನ್ನು ಸ್ಮರಿಸಿದರು. ಗ್ರಂಥಾಲಯದ ಅಧ್ಯಕ್ಷರಾದ ಶ್ರೀ ಆದಿನಾರಾಯಣ ಭಟ್ ಸ್ವಾಗತ ಗೈದರು. ಗ್ರಂಥಾಲಯದ ಕಾರ್ಯದರ್ಶಿಗಳಾದ ಶ್ರೀ ಶೇಖರ ಶೆಟ್ಟಿ ಬಾಯಾರು ಧನ್ಯವಾದವಿತ್ತರು.

SHARE
Loading spinner

Leave a Reply

Your email address will not be published. Required fields are marked *

error: Content is protected !!