ಹಿರಿಯರು ಸರ್ವಸ್ವವನ್ನೂ ತ್ಯಾಗ ಮಾಡಿ ಕಟ್ಟಿ ಬೆಳೆಸಿದ ಕಾಂಗ್ರೆಸ್ ಎಂದೆಂದಿಗೂ ಜನಹೃದಯಗಳಲ್ಲಿ ಜೀವಂತವಾಗಿರುತ್ತದೆ. ಪ್ರತಿಯೋರ್ವ ಭಾರತೀಯನ ಧಮನಿಗಳಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ ಎಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಸೋಮಶೇಖರ್ ಜೆ. ಎಸ್. ಹೇಳಿದ್ದಾರೆ.
ಅವರು ಮಂಗಲ್ಪಾಡಿ ಮಂಡಲ ಹದಿಮೂರನೇ ಮಲಂದೂರು ವಾರ್ಡ್ ಕಾಂಗ್ರೆಸ್ ರೂಪೀಕರಣ ಸಭೆ ಹಾಗೂ ಮಹಾತ್ಮಾ ಗಾಂಧಿ ಕುಟುಂಬ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಮುಖ್ಯ ಭಾಷಣ ಮಾಡಿದರು.
ಶ್ರೀ ಇಬ್ರಾಹಿಂ ಇಚ್ಲಂಗೋಡುರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇತಾರರಾದ ಫಾರೂಕ್ ಶಿರಿಯ, ಬಾಬು ಬಂದ್ಯೋಡು, ಗೀತಾ ಬಂದ್ಯೋಡು, ಮುಹಮ್ಮದ್ ಸೀಗಂಡಡಿ, ಅಶ್ರಫ್ ಮುಟ್ಟಂ, ಶಿಹಾಬ್ ಎಂಕೆ, ಮೊಯಿನ್ ಪೂನಾ, ಮುಹಮ್ಮದ್ ಮಲಂದೂರ್, ಹುಸೈನ್ ಕುಬಣೂರು ಮುಂತಾದವರು ಉಪಸ್ಥಿತರಿದ್ದರು.
ಹದಿಮೂರನೇ ವಾರ್ಡ್ ಕಾಂಗ್ರೆಸ್ ಸಮಿತಿಯನ್ನು ಈ ಕೆಳಗಿನಂತೆ ರೂಪೀಕರಿಸಲಾಯಿತು.
ಇಬ್ರಾಹಿಂ (ಅಧ್ಯಕ್ಷರು),ಬಾಬು, ಶಿಹಾಬ್ ಎಂಕೆ, ಅಬ್ದುಲ್ ರಹ್ಮಾನ್, ದಾವೂದ್ ಹಾಜಿ (ಉಪಾಧ್ಯಕ್ಷರುಗಳು), ಶಫೀಕ್,ಔಫ್, ಮಿಸ್ಬಾಹ್, ಮುಹಮ್ಮದ್ ಪೂನಾ, ಮುಹಮ್ಮದ್ ಪಾರ (ಪ್ರ.ಕಾರ್ಯದರ್ಶಿಗಳು)ಅಶ್ರಫ್ ಚಂದೊಟ್ಟಿ (ಖಜಾಂಚಿ)ಶುಹೈಬ್, ಸುಂದರಿ ಇಚ್ಲಂಗೋಡು, ಫಾತಿಮಾ ಸಲ್ಫಾ, ಮುಹಮ್ಮದ್ ಕಟ್ಟಿಚಿರ (ಕಾರ್ಯಕಾರಿ ಸಮಿತಿ)