ಮಂಜೇಶ್ವರ : ಕುಂಜತ್ತೂರು ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಪೋಷಕರಿಗಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪೋಷಕರ ಮಕ್ಕಳ ಮೇಲಿನ ಕರ್ತವ್ಯಗಳು ಎಂಬ ಮಹತ್ವಪೂರ್ಣ ವಿಷಯ ಉಪನ್ಯಾಸದ ಪ್ರಧಾನ ವಿಷಯವಾಗಿದ್ದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಪೋಷಕರಿಗೆ ಮಕ್ಕಳ ಪಾಲನೆಯ ಜವಾಬ್ದಾರಿ ಮತ್ತು ನೈತಿಕ ಬೆಳೆವಣಿಗೆಯ ಕುರಿತು ಅರಿವು ಮೂಡಿಸುವುದು ಹಾಗೂ ಅವರಲ್ಲಿ ಜವಾಬ್ದಾರಿಯುತ ಮನೋಭಾವವನ್ನು ಬೆಳೆಸುವುದಾಗಿತ್ತು.
ಉಪನ್ಯಾಸಕರಾಗಿ ಭಾಗವಹಿಸಿದ್ದ ಮೊಹಮ್ಮದಲಿ ಸಲಫಿ ಅವರು ತೀವ್ರವಾದ ನೈತಿಕತೆಯೊಂದಿಗೆ ಹಾಗೂ ಇಸ್ಲಾಮಿಕ ದೃಷ್ಠಿಕೋನದಿಂದ ಪೋಷಕರ ಕರ್ತವ್ಯಗಳನ್ನು ವಿವರಿಸಿದರು.ಮಕ್ಕಳಿಗೆ ಧಾರ್ಮಿಕ ಹಾಗೂ ಜಾಗತಿಕ ವಿದ್ಯೆಯನ್ನು ಸಮತೋಲನದಿಂದ ಕಲಿಸುವ ಕರ್ತವ್ಯವನ್ನು ಪೋಷಕರು ನಿರ್ವಹಿಸಬೇಕು.ಪೋಷಕರು ತಮ್ಮ ಉದ್ಯೋಗದ ಒತ್ತಡದ ಮಧ್ಯೆಯೂ ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯಬೇಕು. ಇದರಿಂದ ಅವರ ನಡುವೆ ಆತ್ಮೀಯತೆಯ ನಂಟು ಬೆಳೆದು ಮಕ್ಕಳ ಬೆಳವಣಿಗೆಯಲ್ಲೂ ಸಹಾಯವಾಗುತ್ತದೆ. ಎಂಬದಾಗಿ ವಿವರಿಸಿದರು.
ಈ ಸಂದರ್ಭ ಶಾಲಾ ಚೇಯರ್ಮ್ಯಾನ್ ಅಬ್ದುಲ್ ರಹ್ಮಾನ್ ಅರಿಮಲ, ಪ್ರಾಂಶುಪಾಲ ಅಬ್ದುಲ್ ಖಾದರ್, ಶಾಲಾ ಅಧ್ಯಾಪಕರುಗಳು ಉಪಸ್ಥಿತರಿದ್ದರು.ಈ ಕಾರ್ಯಕ್ರಮ ಪೋಷಕರಿಗೆ ತಮ್ಮ ಜವಾಬ್ದಾರಿಗಳ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.ಕಾರ್ಯಕ್ರಮದಲ್ಲಿ ಪೋಷಕರು, ಹಿತೈಷಿಗಳು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು.