ಮಂಜೇಶ್ವರ ಉಪಜಿಲ್ಲಾ ಶಾಸ್ತ್ರಮೇಳ 2025 ಸಂಘಟಕ ಸಮಿತಿ ರಚನೆ.

ಮಂಜೇಶ್ವರ ಉಪಜಿಲ್ಲಾ ಶಾಸ್ತ್ರಮೇಳ 2025 ಇದರ ಸಂಘಟಕ ಸಮಿತಿ ರಚನಾ ಸಭೆಯು ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆ ಕೊಡ್ಲಮೊಗರಿನಲ್ಲಿ ನಡೆಯಿತು. ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಎಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಶ್ರೀಯುತ ಜಾರ್ಜ್ ಕ್ರಾಸ್ತಾ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ, ಸ್ಥಳೀಯ ವಾರ್ಡ್ ಸದಸ್ಯೆ ಶ್ರೀಮತಿ ಆಶಾಲತಾ. ಎ, ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮಮತ,ಜಿಲ್ಲಾ ಪ್ರಾಂಶುಪಾಲರ ವೇದಿಕೆ ಕಾರ್ಯದರ್ಶಿ ಶ್ರೀಯುತ ರಮೇಶ್ ಕೆ ಎನ್. ಶುಭಾಶಂಸನೆಗೖದರು.

ವಿವಿಧ ಕ್ಲಬ್ ಕನ್ವಿನರುಗಳಾದ ಶ್ರೀ ಈಶ್ವರ ಕಿದೂರು, ಶ್ರೀ ಕೃಷ್ಣಶರ್ಮ, ಶ್ರೀಮತಿ ಚಂದ್ರಿಕ ಭಾಕ್ರಬೈಲ್, ಶ್ರೀ ರಾಜೇಶ್ ಕೊಡ್ಲಮೊಗರು, ಹಳೆ ವಿದ್ಯಾರ್ಥಿಗಳು, ಪಿ ಇ.ಸಿ ಸೆಕ್ರಟರ ಶ್ರೀಮತಿ ಪ್ರತಿಭಾ ಟೀಚರ್, ವಿವಿಧ ಶಾಲೆಗಳಿಂದ ಆಗಮಿಸಿದ ಮುಖ್ಯೋಪಾಧ್ಯಯರುಗಳು, ವಿವಿಧ ಅಧ್ಯಾಪಕ ಸಂಘಟನೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಕೃಷ್ಣವೇಣಿ ಶಾಸ್ತ್ರ ಮೇಳದ ಸಂಘಟಕ ಸಮಿತಿಯ ಕರಡು ಪ್ರತಿಯನ್ನು ಮಂಡಿಸಿದರು. ಜಿಲ್ಲಾ ಮುಖ್ಯೋಪಾಧ್ಯಾಯರ ವೇದಿಕೆಯ ಅಧ್ಯಕ್ಷರಾದ ಶ್ರೀಯುತ ಶ್ಯಾಮ್ ಭಟ್ ಶಾಸ್ತ್ರ ಮೇಳದ ಮುಂಗಡ ಪತ್ರವನ್ನು ಮಂಡಿಸಿದರು. ಸಭೆಯ ಅಧ್ಯಕ್ಷರಾದ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಅಬ್ದುಲ್ ಮಜೀದ್ ಅವರ ಅಧ್ಯಕ್ಷರ ಮಾತಿನೊಂದಿಗೆ ಸಭೆ ಮುಕ್ತಾಯವಾಯಿತು.ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ವಿಜಯಕುಮಾರ್ ಅವರು ಸ್ವಾಗತಿಸಿ, ಶ್ರೀ ವಾಣಿ ವಿಜಯ ಎ ಯು ಪಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ಸುಬ್ರಹ್ಮಣ್ಯ ಭಟ್ ಧನ್ಯವಾದಗಳನ್ನು ಅರ್ಪಿಸಿದರು. ಶ್ರೀಯುತ ರಾಕೇಶ್ ಆರ್ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.ಸುಮಾರು 72 ಶಾಲೆಗಳಿಂದ ಬರುವ 4000 ವಿದ್ಯಾರ್ಥಿಗಳ ಭಾಗವವಿಸುವ ಕಾರ್ಯಕ್ರಮ ಇದಾಗಿರುತ್ತದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!