ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು ಶಾಲೆಯಲ್ಲಿ ಓಣಂ ಹಬ್ಬ ಆಚರಣೆ.

ಮಂಜೇಶ್ವರ : ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು ಶಾಲೆಯಲ್ಲಿ ಆಗಸ್ಟ್ 29ರ ಶುಕ್ರವಾರದಂದು ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನೀತಾ ಶುಭ ಹಾರೈಸಿದರು. ವೈವಿಧ್ಯಮಯ ಪೂಕಳಂಗಳನ್ನು ರಚಿಸಿದ ನಂತರ ಶಿಕ್ಷಕಿಯರು ಕೈಕೊಟ್ಟಿಕಲಿ ನೃತ್ಯವನ್ನು ಪ್ರದರ್ಶಿಸಿದರು.

ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಎಲ್ಲರಿಗೂ ಓಣಂ ಸದ್ಯವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ, ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಎಸ್ಎಂಸಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!