ಕಾಸರಗೋಡು ಜಿಲ್ಲೆಯ ಕೆ.ಪಿ.ಎಸ್.ಎಂ.ಎ.ಯ ನೇತೃತ್ವದಲ್ಲಿ, ಕಾಞ್ಙಂಗಾಡು ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಸಾಮೂಹಿಕ ಧರಣಿ

ಕಾಸರಗೋಡು ಜಿಲ್ಲೆಯ ಕೆ.ಪಿ.ಎಸ್.ಎಂ.ಎ.ಯ ನೇತೃತ್ವದಲ್ಲಿ, ಕಾಞ್ಙಂಗಾಡು ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಸಾಮೂಹಿಕ ಧರಣಿಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಮಣಿ ಕೊಲ್ಲಂ ಉದ್ಘಾಟಿಸಿದರು.


ಕೇರಳದ ಎಯ್ಡೆಡ್ ಶಾಲೆಗಳ ವ್ಯವಸ್ಥಾಪಕರು ಎದುರಿಸುತ್ತಿರುವ ತೊಂದರೆಗಳನ್ನು ಶೀಘ್ರದಲ್ಲೇ ಪರಿಹರಿಸಬೇಕು, ಇಲ್ಲವಾದರೆ ರಾಜ್ಯದಾದ್ಯಂತ ಪ್ರಬಲವಾದ ಪ್ರತಿಭಟನೆಗಳನ್ನು ಸಂಘಟಿಸಲಾಗುವುದೆಂದು ಪ್ರಧಾನ ಕಾರ್ಯದರ್ಶಿ ಹೇಳಿದರು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ಕೆ. ರಾಜನ್ ನಾಯರ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜೀವನ್ ಮೇಲನಡಿ, ಪ್ರಸೀತ್ ಕುಮಾರ್, ಎಸ್.ಎನ್. ಶರ್ಮ, ಶ್ರೀಧರ ರಾವ್, ಜಯದೇವ ಖಂಡಿಗೇ, ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ನಾರಾಯಣ ಭಟ್ ಪೆರಡಾಲ, ಟಿ.ಎಂ.ಸಿ. ಕುಂಜಾಬ್ದುಲ್ಲ ಮುಂತಾದವರು ಮಾತನಾಡಿದರು.

ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ನಾರಾಯಣ ಸ್ವಾಗತ ಭಾಷಣ ಮಾಡಿದರು ಮತ್ತು ಎಸ್.ಎನ್. ಭಟ್ ಧರ್ಮತಡ್ಕ ಧನ್ಯವಾದ ಸಲ್ಲಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!