ಕಟೀಲಿನ ಗೋಣಿಚೀಲ ಸಮಸ್ಯೆ – ಸುದ್ದಿಗೋಷ್ಠಿಯಲ್ಲಿ ಸ್ಪಷ್ಟತೆ

ಮಂಗಳೂರು: ಇತ್ತೀಚಿಗೆ ವೈರಲ್ ಆದ ಕಟೀಲು ಪರಿಸರದ ನ್ಯಾಯಬೆಲೆ ಅಂಗಡಿಯೊಂದರ ಗೋಣಿ ಚೀಲ ಸಮಸ್ಯೆಯ ಕುರಿತಾದ ಸ್ಪಷ್ಟತೆಯನ್ನು ನೀಡುವ ಸಲುವಾಗಿ ನಗರದ ಪತ್ರಿಕಾ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷರಾದ ಕೇಶವ ಮೂರ್ತಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಯಿತು .

ಸುದ್ದಿಗೋಷ್ಠಿಯಲ್ಲಿ ಕಟೀಲು ಪರಿಸರದ ನ್ಯಾಯಬೆಲೆ ಪಡಿತರ ವಿತರಕರಾದ ದೀಪಾ ನಾಯಕ್ ಮಾತನಾಡಿ , ಇತ್ತೀಚೆಗೆ ಮಂಗಳೂರಿನ ಕಟೀಲು ಪರಿಸರದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಗ್ರಾಹಕರಾದ ಸತೀಶ್ ಮತ್ತು ವಿಜಯ್ ಎಂಬಾತ ಚಿತ್ರೀಕರಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ , ಈ ವಿಡಿಯೋದಲ್ಲಿ ಗೋಣಿಚೀಲ ಉಚಿತವಾಗಿ ನೀಡುವಂತೆ ಗ್ರಾಹಕರು ಅಂಗಡಿದಾರರನ್ನು ಬೆದರಿಸುವ ವಿಡಿಯೋ ಇದಾಗಿದೆ .

ಆ ವೀಡಿಯೋ ವೀಕ್ಷಿಸಿದ ನಂತರ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿದ್ದು, ಈ ವಿಚಾರವು ಸರಿ ಎಂದು ತಿಳಿದು ಸಾರ್ವಜನಿಕರು ಎಲ್ಲಾ ನ್ಯಾಯಬೆಲೆ ಅಂಗಡಿದಾರರನ್ನು ವಕ್ರ ದೃಷ್ಟಿಯಲ್ಲಿ ನೋಡುತ್ತಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದರು .

ಕರ್ನಾಟಕ ಸರಕಾರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಉಪಕಾರ್ಯದರ್ಶಿಯವರ ದಿನಾಂಕ 13. 4. 2016 ರಂದು ಕರ್ನಾಟಕ ರಾಜಪಾಲರ ಆದೇಶ ಅನುಸಾರ ನೀಡಿದ ಸರಕಾರದ ಆದೇಶ ಸಂಖ್ಯೆ2.16ರ ಪ್ರಕಾರ ನ್ಯಾಯಬೆಲೆ ಅಂಗಡಿದಾರರಾದ ಮಾಲಕರುಗಳಿಗೆ ನೀಡಲಾಗುತ್ತಿರುವ ಲಾಭಾಂಶಕ್ಕೆ ಸಂಬಂಧಿಸಿದಂತೆ ನಗದು ಹಾಗೂ ವಸ್ತು ರೂಪದಲ್ಲಿ ಲಾಭಾಂಶದ ಪ್ರಸ್ತಾವನೆ ನೀಡಲಾಗಿದೆ.

ಅಲ್ಲದೆ 2018 ರಲ್ಲಿ ಜಾರಿಗೆ ಬಂದ ನಿಯಮ ಹೇಳುವಂತೆ ನ್ಯಾಯಬೆಲೆ ಅಂಗಡಿದಾರರಿಗೆ ಪ್ರತಿ ಕ್ವಿಂಟಾಲಿಗೆ ಲಾಭಾಂಶವನ್ನು ರೂಪಾಯಿ 56 ಎಂದು ನಿಗದಿಪಡಿಸಿದ್ದು ಈ ಪೈಕಿ ರೂಪಾಯಿ 36 ನಗದು ರೂಪದಲ್ಲಿ ಹಾಗೂ 20 ಪ್ರತಿ ಕ್ವಿಂಟಾಲಿನ ಎರಡು ಗೋಣಿ ಚೀಲಗಳ ರೂಪದಲಿ ಎಂದು ಸೂಚಿಸಲಾಗಿದೆ. ಈ ನಿಯಮ ತಿಳಿಯದೆ ಗ್ರಾಹಕ ಈ ರೀತಿಯ ವರ್ತನೆ ಸರಿಯಲ್ಲ ,ದ . ಕ ಜಿಲ್ಲಾ ಸರಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷರಾದ ಕೇಶವ ಮೂರ್ತಿ ಮಾತನಾಡಿ , ಒನ್ ನೇಷನ್ ಒನ್ ರೇಷನ್ ಕಾರ್ಡ್ ಎಂಬ ಕೇಂದ್ರ ಸರಕಾರದ ಆದೇಶದಂತೆ ನಾವು ಯಾವುದೇ ಅರ್ಹ ವ್ಯಕ್ತಿ ಅಕ್ಕಿ ಕೇಳಿದರು ಕೊಡಬೇಕಾಗಿರುವುದರಿಂದಲೂ ನಮ್ಮ ರಾಜದ ಮಾಜಿ ಆಹಾರ ಸಚಿವರು ಪಡುತ್ತ ರಾಜದ ಸಭಾಪತಿ ಆಗಿರುವ ಯು.ಟಿ. ಖಾದರ್ ಅವರು ಇತ್ತೀಚೆಗೆಗಿನ ವಿಧಾನ ಸಭೆಯ ಕಲಾಪದಲ್ಲಿ ಎಲ್ಲಾ ಪಡಿತರ ಅಂಗಡಿದಾರರಿಗೆ ಹೆಚ್ಚುವರಿಯಾಗಿ 10% ಅಕ್ಕಿ ವಿತರಿಸಬೇಕೆಂದು ತಿಳಿಸಿರುವುದರಿಂದಲೂ ಅದು ಕಣ ಜಾರಿಮಾಡಬೇಕಾಗಿಯೂ ಅಲ್ಲದೇ ಎ ಪಿ ಲ್ ಕಾರ್ಡ್ ದಾರರಿಗೂ ಅಕ್ಕಿಯನ್ನು ನೀಡಬೇಕೆಂದು ಅವರು ಒತ್ತಾಯಿಸಿದರು .

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಭಾಸ್ಕರ್ ಸಾಲಿಯಾನ್ , ಕೋಶಾಧಿಕಾರಿ ಫೈರೋಜ್ ಡಿ ಎಂ , ನಿತ್ಯಾನಂದ ಮುಂತಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!