ಮಂಜೇಶ್ವರ: ಉಪ್ಪಳ ಸೊಂಕಾಲಿನ ಮನೆಯಿಂದ 33.5 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಇನ್ನೊಬ್ಬ ಆರೋಪಿ ಕೂಡಾ ಬಂಧನಕ್ಕೊಳಗಾಗಿದ್ದಾನೆ. ಉಪ್ಪಳ ಕುಕ್ಕಾರಿನ ಟಿಪ್ಪರ್ ಹಮೀದ್ (32) ಬಂಧಿತ ಆರೋಪಿ. ಈತನನ್ನು ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸುತ್ತಿದ್ದಾರೆ.
ಜೂನ್ 1ರಂದು ಈ ಪ್ರಕರಣ ಬೆಳಕಿಗೆ ಬಂದಿತ್ತು. ಉಪ್ಪಳ ಸೊಂಕಾಲಿನ ಎ. ಅಶೋಕ್ (45) ಅವರ ಮನೆಯಲ್ಲಿ, ಹಾಸಿಗೆಯ ಕೆಳಭಾಗದಲ್ಲಿದ್ದ ಚೀಲಗಳಲ್ಲಿ ಗಾಂಜಾ ಪತ್ತೆಯಾಗಿತ್ತು. ಅಶೋಕರನ್ನು ವಿಚಾರಿಸಿದಾಗ ಹಮೀದ್ ಸಹಪ್ರತಿಯಾಗಿರುವುದು ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.