ಜನನಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವೀರ ನಗರ ಅಡ್ಕ ಇದರ 29 ನೇ ವಾರ್ಷಿಕ ಗಣೇಶ ಚತುರ್ಥಿಯ ಪ್ರಯುಕ್ತ ನಡೆದಂತ ವಿವಿಧ ಆಟೋಟ ಸ್ಪರ್ಧೆ ಹಾಗೂ ಧಾರ್ಮಿಕ ಸಭೆ ಶ್ರೀ ನಾಗ ರಕ್ತೇಶ್ವರಿ ಗುಳಿಗಜ್ಜ ಕೊರಗಜ್ಜ ಸಾನಿಧ್ಯ ವೀರನಗರ ಅಡ್ಕ ಇಲ್ಲಿ ವಿವಿಧ ಸಾಂಸ್ಕೃತಿಕ ಧಾರ್ಮಿಕ ಹಾಗೂ ಆಟೋಟ ಸ್ಪರ್ಧೆಗಳೊಂದಿಗೆ ನಡೆಯಿತು.ಬೆಳಗ್ಗೆ 7 ಗಂಟೆಗೆ ಗಣಹೋಮ ನಡೆಯಿತು.
ಯುವಕರ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ ವಿನಾಯಕ ಹೇರೂರು ,ಧ್ವಿತೀಯ ಸ್ಥಾನ PFC ಪರೆಂಕಿಲ .ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ ಸ್ವಾಮಿ ಕೊರಗಜ್ಜ ವೀರನಗರ ದ್ವಿತೀಯ ಸ್ಥಾನ ಉಳ್ಳಾಲ್ತಿ ವೀರನಗರ .ಪ್ಲಸ್ ಟೂ ಕೆಳಗಿನ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ ನವೋದಯ ಮುಟ್ಟಂ, ದ್ವಿತೀಯ ಸ್ಥಾನ ಪ್ರಗತಿ ಮುಟ್ಟಂ
ಸಭಾ ಕಾರ್ಯಕ್ರಮ ಅಧ್ಯಕ್ಷ ಸ್ಥಾನವನ್ನು ಕೃಷ್ಣ ಪ್ರಗತಿನಗರ ವಹಿಸಿದರು.ಮುಖ್ಯ ಅಥಿತಿಯಾಗಿ ಆನಂದ ವೀರನಗರ ,ಜನಾರ್ಧನ ,ಶಶಿ ಮುಟ್ಟಂ ,ಸುರೇಶ ಮುಟ್ಟಂ ,ಶಾಂತಾರಾಮ ಶೆಟ್ಟಿ ವೀರನಗರ ಉಪಸ್ಥಿತರಿದ್ದರು.ಕ್ಲಬ್ ನ ಅಧ್ಯಕ್ಷ ಮಣಿ ವೀರನಗರ ವಂದಿಸಿದರು.